alex Certify ನ್ಯುಮೊನಿಯಾ ಚಿಕಿತ್ಸೆಗೆ ಸಹಕಾರಿ ಜೇನುತುಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯುಮೊನಿಯಾ ಚಿಕಿತ್ಸೆಗೆ ಸಹಕಾರಿ ಜೇನುತುಪ್ಪ

ನ್ಯುಮೋನಿಯಾ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ವೈರಸ್ ಗಳಿಂದ ಉಂಟಾಗುವ ಶಾಸ್ವಕೋಶದ ಸೋಂಕಾಗಿದೆ. ಇದು ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ಶೀತಗಳಿಗೆ ಕಾರಣವಾಗುತ್ತದೆ. ಈ ನ್ಯುಮೋನಿಯಾ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಜೇನುತುಪ್ಪ : ನ್ಯುಮೊನಿಯಾ ಚಿಕಿತ್ಸೆಗೆ ಜೇನುತುಪ್ಪ ಬಹಳ ಸಹಕಾರಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕೆಮ್ಮು, ಶೀತ, ಕಫದಂತಹ ನ್ಯುಮೊನಿಯಾ ಲಕ್ಷಣಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ಅರಶಿನ : ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ನ್ಯುಮೊನಿಯಾದ ಪ್ರಾಥಮಿಕ ಲಕ್ಷಣವಾದ ಎದೆನೋವನ್ನು ನಿವಾರಿಸುತ್ತದೆ. ಇದು ಶ್ವಾಸಕೋಶದ ಲೋಳೆ ಅಂಶವನ್ನು ತೆಗೆದುಹಾಕಲು ಸಹಕಾರಿಯಾಗಿದೆ. ಇದರಿಂದ ಸುಲಭವಾಗಿ ಉಸಿರಾಡಬಹುದು.

ಶುಂಠಿ : ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಎದೆಯಲ್ಲಿರುವ ಕಫಗಳನ್ನು ಕರಗಿಸಿ ಹೊರಹಾಕುವುದರ ಮೂಲಕ ಎದೆನೋವನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...