alex Certify ಚಳಿಗಾಲದಲ್ಲಿ ಹೀಗೂ ಮಾಡಬಹುದು ತಣ್ಣೀರ ಸ್ನಾನ: ವಿಡಿಯೋ ನೋಡಿ ನಕ್ಕು ನುಕ್ಕು ಸುಸ್ತಾದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೀಗೂ ಮಾಡಬಹುದು ತಣ್ಣೀರ ಸ್ನಾನ: ವಿಡಿಯೋ ನೋಡಿ ನಕ್ಕು ನುಕ್ಕು ಸುಸ್ತಾದ ಜನ…!

ಚಳಿಗಾಲ ಶುರುವಾಗಿದೆ. ಹಲವೆಡೆಗಳಲ್ಲಿ ಮೈ ಕೊರೆಯುವಷ್ಟು ಚಳಿ ಇದೆ. ಇಂಥ ಸಮಯದಲ್ಲಿ ತಣ್ಣೀರ ಸ್ನಾನ ಮಾಡುವ ವಿಷಯ ಕೇಳಿದರೆನೇ ಮೈಯೆಲ್ಲಾ ನಡುಕ ಉಂಟಾಗುತ್ತದೆಯಲ್ಲವೆ? ಇದಕ್ಕಾಗಿಯೇ ಬಿಸಿ ಬಿಸಿ ನೀರಿನ ಮೊರೆ ಹೋಗುವವರೇ ಹೆಚ್ಚು. ಅಪರೂಪದಲ್ಲಿ ಅಪರೂಪ ಮಂದಿ ಮಾತ್ರ ತಣ್ಣೀರಿನಲ್ಲಿಯೇ ಸ್ನಾನ ಮಾಡುವ ಧೈರ್ಯ ತೋರುತ್ತಾರೆ.

ಈಗ ವೈರಲ್​ ಆಗಿರುವ ವಿಡಿಯೋ ಒಂದು ಚಳಿಗಾಲದಲ್ಲಿ ತಣ್ಣೀರ ಸ್ನಾನ ಹೀಗೂ ಮಾಡಬಹುದು ಎಂದು ತೋರಿಸಲಾಗಿದೆ. ಈ ವಿಡಿಯೋ ನೋಡಿ ಜನರು ನಕ್ಕೂ ನಕ್ಕೂ ಸುಸ್ತಾಗಿದ್ದು, ಇದು ಒಳ್ಳೆಯ ಪ್ಲ್ಯಾನ್​ ಎಂದಿದ್ದಾರೆ.

ಟೊಟೊಲ್ ಮೆರೊಕೆಟ್ ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ಬಕೆಟ್ ನೀರಿನಿಂದ ಸ್ನಾನ ಮಾಡಲು ತಯಾರಾಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಣ್ಣೀರು ತುಂಬಿದ ಚೊಂಬು ತೆಗೆದುಕೊಳ್ಳುತ್ತಾನೆ.

ಅವನು ತನ್ನ ಮೇಲೆ ಸ್ವಲ್ಪ ನೀರನ್ನು ಸುರಿಯಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ತಣ್ಣೀರು ಆಗಿರುವ ಹಿನ್ನೆಲೆಯಲ್ಲಿ ನೀರು ಮೈಮೇಲೆ ಬೀಳುವುದನ್ನು ತಪ್ಪಿಸುತ್ತಾನೆ. ಅವನು ಮಗ್‌ನಿಂದ ನೀರನ್ನು ಅನೇಕ ಬಾರಿ ಸುರಿಯುತ್ತಾನೆ, ಆದರೆ ತಣ್ಣೀರಿಗೆ ಹೆದರಿ ಪ್ರತಿ ಬಾರಿ ನೀರನ್ನು ಹೊರಗೆ ಚೆಲ್ಲುತ್ತಾನೆ. ಕೊನೆಗೂ ಅವನ ಸ್ನಾನ ಆಗುತ್ತದೆ. ಅದು ಹೇಗೆ ಎಂದರೆ ಅವನು ತನ್ನ ಬೆರಳುಗಳನ್ನು ಒದ್ದೆ ಮಾಡಿಕೊಂಡು ಅದರಿಂದ ಕಣ್ಣುಗಳನ್ನು ಒರೆಸಿಕೊಂಡು ಬಾತ್​ರೂಂನಿಂದ ನಿರ್ಗಮಿಸುತ್ತಾನೆ, ಅಲ್ಲಿಗೆ ಅವನ ಸ್ನಾನ ಮುಗಿಯುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...