alex Certify ಐತಿಹಾಸಿಕ ‘ಚಂದ್ರಯಾನ-3’ ಯಶಸ್ವಿ ಉಡಾವಣೆ : ವಿಜ್ಞಾನಿಗಳ ಸಾಧನೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐತಿಹಾಸಿಕ ‘ಚಂದ್ರಯಾನ-3’ ಯಶಸ್ವಿ ಉಡಾವಣೆ : ವಿಜ್ಞಾನಿಗಳ ಸಾಧನೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

ಬೆಂಗಳೂರು : ಇಂದು ಐತಿಹಾಸಿಕ ಚಂದ್ರಯಾನ-3’ ಉಡಾವಣೆ ಯಶಸ್ವಿಯಾಗಿದ್ದು, ವಿಜ್ಞಾನಿಗಳಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಇಸ್ರೋ ವಿಜ್ಞಾನಿಗಳ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಈ ಸಾಧನೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳಲು ಭಾರತದ ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ.ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿದೆ.ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ಹಲವು ವಿಶೇಷತೆ s. ಲ್ಯಾಂಡರ್, ರೋವರ್ ಯಂತ್ರ ಒಳಗೊಂಡಿದೆ. ಚಂದ್ರಯಾನ-3 ನೌಕೆ ನಭಕ್ಕೆ ಹೊತ್ತೊಯ್ಯುವ GSLV-MK3 ರಾಕೆಟ್, GSLV-MK3 ರಾಕೆಟ್-43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿದೆ.ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆ ಆಗಿದ್ದು, ಚಂದ್ರಯಾನ-3 ನೌಕೆಯನ್ನು GSLV-MK3 ರಾಕೆಟ್ ಹೊತ್ತೊಯ್ದಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...