alex Certify ಹಿಜಾಬ್ ವಿವಾದ: ರಾಷ್ಟ್ರೀಯ ಭಾವೈಕ್ಯತೆ ಉತ್ತೇಜಿಸಲು ಏಕರೂಪ ಸಮವಸ್ತ್ರ ನೀತಿ ತರಲು ಕೋರಿ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ವಿವಾದ: ರಾಷ್ಟ್ರೀಯ ಭಾವೈಕ್ಯತೆ ಉತ್ತೇಜಿಸಲು ಏಕರೂಪ ಸಮವಸ್ತ್ರ ನೀತಿ ತರಲು ಕೋರಿ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ

ದೇಶಾದ್ಯಂತ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಂದ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ, 18 ವರ್ಷದ ನಿಖಿಲ್ ಉಪಾಧ್ಯಾಯ ಈ ಪಿಐಎಲ್‌ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಮಿಂಚಬೇಕೆಂದರೆ ಏನೆಲ್ಲ ಮಾಡಬೇಕು ಗೊತ್ತಾ….?

ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಸಮವಸ್ತ್ರ ಸಂಹಿತೆಯು ಸಾಮಾಜಿಕ ಸಮಾನತೆ, ಘನತೆ ಮತ್ತು ಭ್ರಾತೃತ್ವ, ಏಕತೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು ಅತ್ಯಗತ್ಯ ಎಂದು ಪಿಐಎಲ್‌ ತಿಳಿಸಿದೆ.

“ಸಾಮಾನ್ಯ ಡ್ರೆಸ್ ಕೋಡ್ ಸಮಾನತೆ, ಪ್ರಜಾಪ್ರಭುತ್ವ, ಸಾಮಾಜಿತ ನ್ಯಾಯದ ಮೌಲ್ಯಗಳನ್ನು ಹೆಚ್ಚಿಸಲು ಮಾತ್ರವಲ್ಲ, ಜಾತಿವಾದ, ಕೋಮುವಾದ, ವರ್ಗವಾದ, ಮತೀಯವಾದ, ಪ್ರತ್ಯೇಕವಾದ ಹಾಗೂ ಮೂಲಭೂತವಾದದ ಭೂತಗಳನ್ನು ತೊಡೆದು ಹಾಕಿ, ಮಾದರಿ ಸಮಾಜ ನಿರ್ಮಿಸಲು ನೆರವಾಗುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಮೆರಿಕ, ಬ್ರಿಟನ್, ಫ್ರಾನ್ಸ್‌‌, ಸಿಂಗಾಪುರ, ಚೀನಾಗಳಂಥ ದೇಶಗಳಲ್ಲಿ ಶಾಲಾ – ಕಾಲೇಜುಗಳು ಏಕರೂಪ ಸಮವಸ್ತ್ರ ಸಂಹಿತೆ ನೀತಿ ಪಾಲಿಸುತ್ತಿದ್ದು, ಇಲ್ಲಿಯೂ ಸಹ ಅದೇ ರೀತಿಯ ನೀತಿ ತರಲು ಅರ್ಜಿಯಲ್ಲಿ ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...