alex Certify BIG NEWS: ರಷ್ಯಾ – ಉಕ್ರೇನ್ ಯುದ್ಧ ನಡೆದರೆ ಭಾರತದಲ್ಲಿ ದುಬಾರಿಯಾಗಲಿದೆ ತೈಲ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾ – ಉಕ್ರೇನ್ ಯುದ್ಧ ನಡೆದರೆ ಭಾರತದಲ್ಲಿ ದುಬಾರಿಯಾಗಲಿದೆ ತೈಲ ಬೆಲೆ

ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿನ ಜನ ಸಾಮಾನ್ಯರ ಮೇಲೂ ಆಗಬಹುದೆಂದು ಅಂದಾಜಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇಡೀ ಜಗತ್ತು ಈ ಬೆಳವಣಿಗೆ ಗಮನಿಸುತ್ತಿದ್ದು, ಆಗಬಹುದಾದ ಆರ್ಥಿಕ ಪರಿಣಾಮವನ್ನೂ ಅಂದಾಜಿಸುತ್ತಿವೆ.

ರೇಂಜ್ ರೋವರ್ ನಿಂದ BMW, ತೆಲುಗು ಸೂಪರ್ ಸ್ಟಾರ್ ರವಿತೇಜಾ ಅವ್ರ ದುಬಾರಿ ಕಾರ್ ಕಲೆಕ್ಷನ್….!

ಯುದ್ಧ ನಡೆದರೆ ನೈಸರ್ಗಿಕ ಅನಿಲದಿಂದ ಗೋಧಿಯವರೆಗೆ, ವಿವಿಧ ಸರಕುಗಳ ಬೆಲೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಉಕ್ರೇನ್-ರಷ್ಯಾ ಬಿಕ್ಕಟ್ಟು ಬ್ರೆಂಟ್ ಕಚ್ಚಾ ತೈಲ ಬೆಲೆಯನ್ನು ಪ್ರತಿ ಬ್ಯಾರೆಲ್‌ಗೆ $ 96.7ಕ್ಕೆ ತಳ್ಳಿದೆ, ಇದು ಸೆಪ್ಟೆಂಬರ್ 2014 ರಿಂದ ಅತ್ಯಧಿಕವಾಗಿದೆ.

ಕಚ್ಚಾ ತೈಲದ ಅತಿದೊಡ್ಡ ಉತ್ಪಾದಕರಲ್ಲಿ ರಷ್ಯಾ ಒಂದಾಗಿದೆ. ಪ್ರಸ್ತುತ ಬಿಕ್ಕಟ್ಟು ಮುಂಬರುವ ದಿನಗಳಲ್ಲಿ ಪ್ರತಿ ಬ್ಯಾರೆಲ್‌ಗೆ $100 ಕ್ಕಿಂತ ಹೆಚ್ಚಿನ ಬೆಲೆಗೆ ಏರಲು ಕಾರಣವಾಗಬಹುದು. ಕಚ್ಚಾ ತೈಲ ಬೆಲೆಯ ಹೆಚ್ಚಳವು ಜಾಗತಿಕ ಜಿಡಿಪಿ ಮೇಲೆ ಪರಿಣಾಮವನ್ನು ಬೀರುತ್ತದೆ.

ತೈಲ ಬೆಲೆಯಲ್ಲಿ ಒಂದು ಬ್ಯಾರೆಲ್‌ಗೆ $150 ಗೆ ಏರಿಕೆಯು ಜಾಗತಿಕ ಜಿಡಿಪಿ ಬೆಳವಣಿಗೆಯನ್ನು 0.9 ಪ್ರತಿಶತಕ್ಕೆ ತಗ್ಗಿಸಬಹುದೆಂದು ಸಂಸ್ಥೆಯೊಂದು ಅಂದಾಜಿಸಿದೆ. ತಜ್ಞರ ಪ್ರಕಾರ, ಯುದ್ಧ ನಡೆದರೆ ನೈಸರ್ಗಿಕ ಅನಿಲದ ಬೆಲೆ ಹತ್ತು ಪಟ್ಟು ಹೆಚ್ಚಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...