alex Certify ಕಂಕುಳಿನ ಕಪ್ಪು ಕಲೆಯಿಂದ ಬೇಸತ್ತಿದ್ದೀರಾ……? ಈ ಮನೆ ಮದ್ದುಗಳನ್ನ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಕುಳಿನ ಕಪ್ಪು ಕಲೆಯಿಂದ ಬೇಸತ್ತಿದ್ದೀರಾ……? ಈ ಮನೆ ಮದ್ದುಗಳನ್ನ ಟ್ರೈ ಮಾಡಿ ನೋಡಿ

ಕಂಕುಳಲ್ಲಿ ಕಪ್ಪು ಕಲೆ ಬಹುತೇಕ ಮಂದಿಗೆ ಇರುವ ಸಮಸ್ಯೆ. ಈ ಸಮಸ್ಯೆಯಿಂದಾಗಿ ಮಹಿಳೆಯರಿಗೆ ತುಂಬಾನೇ ಕಷ್ಟ ಎನಿಸುತ್ತೆ.

ಸ್ಲೀವ್​ಲೆಸ್​​​​ ಟಾಪ್​ಗಳನ್ನ ಧರಿಸಿದ ವೇಳೆ ಈ ಕಪ್ಪು ಕಲೆ ಎದ್ದು ಕಾಣೋದ್ರಿಂದ ಎಷ್ಟೋ ಬಾರಿ ಹೆಣ್ಣುಮಕ್ಕಳು ತಮ್ಮಿಷ್ಟದ ಉಡುಪುಗಳನ್ನ ತ್ಯಜಿಸಿದ್ದೂ ಉಂಟು. ನಿಮಗೂ ಕೂಡ ಈ ಸಮಸ್ಯೆ ಇದ್ದಿದ್ದಲ್ಲಿ ಮನೆಮದ್ದನ್ನೇ ಬಳಕೆ ಮಾಡಿಕೊಂಡು ಇದರಿಂದ ಮುಕ್ತಿ ಹೊಂದಬಹುದಾಗಿದೆ.

ಕಿತ್ತಳೆ ಹಣ್ಣಿನ ಸಿಪ್ಪೆ ಚರ್ಮವನ್ನ ಸ್ವಚ್ಛ ಮಾಡುತ್ತದೆ. ಇದಕ್ಕಾಗಿ ನೀವು ಕಿತ್ತಳೆ ಹಣ್ಣಿನ ಸಿಪ್ಪೆಯನ್ನ ಬಿಸಿಲಿನಲ್ಲಿ ಒಣಗಿಸಿ ಅವುಗಳನ್ನ ರುಬ್ಬಿಕೊಳ್ಳಿ. ಈ ಪುಡಿಗೆ ರೋಸ್​ ವಾಟರ್​ ಹಾಗೂ ಹಾಲನ್ನ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದರಿಂದ ಕಂಕುಳಿಗೆ ಮಸಾಜ್​ ಮಾಡಿ. ಕೆಲವೇ ದಿನಗಳಲ್ಲಿ ಫಲಿತಾಂಶ ತಿಳಿಯಲಿದೆ.

ಕಡ್ಲೆಹಿಟ್ಟಿನಿಂದ ತ್ವಚೆಯ ಆರೋಗ್ಯ ಸುಧಾರಿಸೋದು ಮಾತ್ರವಲ್ಲದೇ ಚರ್ಮದ ಸೌಂದರ್ಯವನ್ನೂ ಹೆಚ್ಚಿಸಲಿದೆ. ಕಡ್ಲೆ ಹಿಟ್ಟಿಗೆ ನಿಂಬೆ ರಸವನ್ನ ಹಾಕಿ ಪೇಸ್ಟ್​ ಮಾಡಿ. ಇದನ್ನ ನಿಮ್ಮ ಕಂಕುಳಿಗೆ ಹಚ್ಚಿ ಮಸಾಜ್​ ಮಾಡಿ. ಇದು ಒಣಗಿದ ಬಳಿಕ ಬೆಚ್ಚನೆಯ ನೀರಿನಲ್ಲಿ ಕಂಕುಳನ್ನ ತೊಳೆಯಿರಿ.

ಆಲೋವೇರಾ ಕೂಡ ನಿಮಗೆ ಈ ಸಮಸ್ಯೆಯಿಂದ ಮುಕ್ತಿ ನೀಡಬಲ್ಲುದು. ಆಲೋವೇರಾ ಜೆಲ್​ನ್ನು ದಿನಕ್ಕೆ ಎರಡು ಬಾರಿ ಕಂಕುಳಿಗೆ ಹಚ್ಚಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...