alex Certify ʼಬಿಳಿ ಕಲೆʼ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಳಿ ಕಲೆʼ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ವಿವಿಧ ಆಕಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಕ್ಯಾಲ್ಸಿಯಂ ಮಾತ್ರೆ ಅಥವಾ ಕ್ಯಾಲ್ಸಿಯಂ ಇರುವ ಯಾವುದಾದ್ರೂ ಪದಾರ್ಥಗಳನ್ನು ಸೇವಿಸಿ, ಕಾಯಿಲೆಯಿಂದ ಮುಕ್ತಿ ಹೊಂದಬಹುದು.

ಬಿಳಿ ಕಲೆ ಕಡಿಮೆಯಾಗುವಂತಹದ್ದು. ಆದ್ರೆ ತಾಳ್ಮೆ ಅಗತ್ಯ. ಕೆಲವು ಉಪಾಯಗಳಿಂದ ಬಿಳಿ ಕಲೆಯನ್ನು ತೆಗೆದು ಹಾಕಬಹುದು. ಅದರ ಜೊತೆಯಲ್ಲಿ ಕೆಲವೊಂದು ಅಂಶಗಳ ಬಗ್ಗೆ ಗಮನ ಇಡಬೇಕಾಗುತ್ತದೆ.

ಆಹಾರದಲ್ಲಿ ಜಾಸ್ತಿ ಉಪ್ಪನ್ನು ಬಳಸಬೇಡಿ. ಹಾಗೇ ಹುಳಿ ಪದಾರ್ಥಗಳಿಂದ ದೂರ ಇರಿ. ಉಪ್ಪಿನಕಾಯಿ, ವಿಟಮಿನ್ ಸಿ ಜೀವಸತ್ವವಿರುವ ಪದಾರ್ಥಗಳನ್ನು ಅಷ್ಟಾಗಿ ಸೇವಿಸಬೇಡಿ.

ಹಾಲಿನ ಪದಾರ್ಥಗಳಿಂದ ದೂರ ಇರಿ. ಮಿಠಾಯಿ, ಮೊಸರನ್ನು ಒಟ್ಟಿಗೆ ಸೇವಿಸಬೇಡಿ.

ಕರಿದ ತಿಂಡಿ, ಮಾಂಸ, ಮೀನಿನಿಂದ ದೂರವಿರಿ

ಹುಳಿ, ಹಸಿಮೆಣಸನ್ನು ಕಡಿಮೆ ಸೇವಿಸಿ.

ತೆಂಗಿನ ಕಾಯಿ ಬಿಳಿ ಕಲೆ ಹೋಗಲಾಡಿಸಲು ಸಹಕಾರಿ. ಹಾಗಾಗಿ ಪ್ರತಿದಿನ ಇದರ ಸೇವನೆ ಮಾಡುವುದು ಉತ್ತಮ.

ಆಹಾರದಲ್ಲಿ ಬೆಳ್ಳುಳ್ಳಿ ಬಳಕೆಯನ್ನು ಜಾಸ್ತಿ ಮಾಡಬೇಕು. ಬೆಳ್ಳುಳ್ಳಿ ರಸವನ್ನು ಬಿಳಿ ಕಲೆಗೆ ಹಚ್ಚಿಕೊಳ್ಳುತ್ತ ಬಂದರೆ ಕಲೆ ಕ್ರಮೇಣ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...