alex Certify ಪುತ್ರನ ಗರ್ಲ್​ಫ್ರೆಂಡ್​ಗೆ ವಿಚಿತ್ರ ಷರತ್ತು ವಿಧಿಸಿದ ತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಗರ್ಲ್​ಫ್ರೆಂಡ್​ಗೆ ವಿಚಿತ್ರ ಷರತ್ತು ವಿಧಿಸಿದ ತಾಯಿ..!

ಪ್ರೀತಿ – ಪ್ರೇಮ ಇವೆಲ್ಲ ಎಲ್ಲರಿಂದಲೂ ಆಗೋ ಕಾರ್ಯವಲ್ಲ. ಅದರಲ್ಲೂ ಪೋಷಕರಿಗೆ ನಿಮ್ಮ ಪ್ರೇಮಿಗಳನ್ನ ಪರಿಚಯ ಮಾಡಿಸಿದರಂತೂ ಆ ಸಂಬಂಧದಲ್ಲಿ ಇನ್ನಷ್ಟು ಟ್ವಿಸ್ಟ್ ಬರೋದ್ರಲ್ಲಿ ಡೌಟ್​ ಇಲ್ಲ. ಅದೇ ರೀತಿ ಇಲ್ಲೊಬ್ಬಳು ಪ್ರಿಯತಮೆ ತನ್ನ ಪ್ರಿಯತಮನ ತಾಯಿ ಹಾಕಿರುವ ಷರತ್ತುಗಳನ್ನ ಟಿಕ್​ಟಾಕ್ ನಲ್ಲಿ​​ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ.

ಟಿಕ್​ಟಾಕ್​ನಲ್ಲಿ ಎಮ್ಮಾ ಎಂಬಾಕೆ ತನ್ನ ಬಾಯ್​ಫ್ರೆಂಡ್​ ತಾಯಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ರೂಲ್ಸ್​ನ್ನು ಶೇರ್ ಮಾಡಿದ್ದಾರೆ.

ಇದರಲ್ಲಿ ತನ್ನ ಪುತ್ರನ ಗರ್ಲ್​ಫ್ರೆಂಡ್​ಗೆ ತಾಯಿ 10 ಷರತ್ತುಗಳನ್ನ ವಿಧಿಸಿದ್ದಾಳೆ. ಆತ ನಿನ್ನ ಎಟಿಎಂ ಕಾರ್ಡ್​ ಅಲ್ಲ ಅನ್ನೋದರ ಮೂಲಕ ರೂಲ್ಸ್ ಆರಂಭವಾಗುತ್ತೆ.

ನೀನು ತುಂಡುಡುಗೆ ಧರಿಸಿ ಮನೆಗೆ ಬಂದರೆ ನಿನ್ನನ್ನ ಆತನಿಂದ ದೂರ ಮಾಡುತ್ತೇನೆ. ನನ್ನ ಪುತ್ರನ ಮೊಬೈಲ್​ನಲ್ಲಿ ಯಾವುದೇ ಸೆಕ್ಸ್ ಚಾಟ್​ಗಳು ಕಂಡರೂ ಸಹ ನಿಮ್ಮಿಬ್ಬರನ್ನ ದೂರ ಮಾಡುತ್ತೇನೆ. ನನಗೆ ನೀನು ಇಷ್ಟವಾಗಿಲ್ಲ ಎಂದರೂ ಸಹ ನಿನ್ನನ್ನ ನನ್ನ ಪುತ್ರನೊಡನೇ ಡೇಟಿಂಗ್ ಮಾಡಲು ನಾನು ಬಿಡೋದಿಲ್ಲ. ನನ್ನ ಮಗನನ್ನ ಜೆಂಟಲ್​ಮ್ಯಾನ್​ನಂತೆ ಸಾಕಿದ್ದೇನೆ. ಹೀಗಾಗಿ ನೀನು ಸಹ ಪ್ರಬುದ್ಧಳಂತೆ ವರ್ತಿಸು. ಇದೆಲ್ಲವನ್ನೂ ಮೀರಿ ನೀನು ಆತನಿಗೆ ಮೋಸ ಮಾಡಿದ್ದಲ್ಲಿ ನಿನ್ನ ಬಾಯ್​ಫ್ರೆಂಡ್​ಗಿಂತ ಆತನ ತಾಯಿ ಇನ್ನೂ ಕೆಟ್ಟವಳಾಗ್ತಾಳೆ ಅನ್ನೋದನ್ನ ನೆನಪಿನಲ್ಲಿ ಇಡು. ನಾನು ನಿನ್ನ ಬಾಯ್​ಫ್ರೆಂಡ್​ ತಾಯಿಗಿಂತ ಹೆಚ್ಚಾಗಿ ನಿನ್ನ ಅತ್ತೆಯಂತೆ ವರ್ತಿಸುತ್ತೇನೆ ಎಂದು ಬರೆಯಲಾಗಿದೆ.

ಈ ನಿಯಮಗಳ ನೋಡಿದ ನೆಟ್ಟಿಗರು ನೀನು ನಿನ್ನ ಬಾಯ್​​ ಫ್ರೆಂಡ್​ ಜೊತೆ ಬ್ರೇಕಪ್​ ಮಾಡಿಕೊಳ್ಳೋದೇ ಒಳಿತು ಎಂದು ಸಲಹೆ ನೀಡಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...