alex Certify ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಕಡಿಮೆ ಬಡ್ಡಿ ದರದಲ್ಲಿ ʼಗೃಹ ಸಾಲʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಕಡಿಮೆ ಬಡ್ಡಿ ದರದಲ್ಲಿ ʼಗೃಹ ಸಾಲʼ

 

ಇನ್ನು ದಸರಾ, ದೀಪಾವಳಿ ಹಬ್ಬಗಳ ಋತು ಶುರುವಾಗಿ, ಇಡೀ ದೇಶವೇ ಸಂಭ್ರಮದಲ್ಲಿ ಮುಳುಗುವ ತವಕದಲ್ಲಿರುವಾಗ ಹೊಸ ಮನೆ ಖರೀದಿದಾರರಿಗೆ ಹಣಕಾಸು ಅನುಕೂಲ ಕಲ್ಪಿಸಲು ಮುಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, ಕೇವಲ 6.70% ಬಡ್ಡಿಗೆ ಗೃಹ ಸಾಲ ಯೋಜನೆಗಳನ್ನು ಶುರು ಮಾಡಿದೆ.
ಸೆ. 20 ರಿಂದ ಅಕ್ಟೋಬರ್‌ 20ರ ನಡುವೆ ಹೊಸ ಗೃಹ ಸಾಲ ಪಡೆಯುವವರಿಗೆ ಮಾತ್ರವೇ ಈ ಬಡ್ಡಿ ದರವು ಸಿಗಲಿದೆ.

ಕೊರೊನಾ ಸಂಕಷ್ಟದಿಂದ ರಿಯಲ್‌ ಎಸ್ಟೇಟ್‌ ಜತೆಗೆ ಹಲವು ಕ್ಷೇತ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವ್ಯವಹಾರದ ವಹಿವಾಟು ಚುರುಕುಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಎಚ್‌ಡಿಎಫ್‌ಸಿ ಮುಂದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ರೇಣು ಕಾರ್ನಾಡ್‌ ಹೇಳಿದ್ದಾರೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಸಬ್ಸಿಡಿ, ಇತರ ಅನೇಕ ತೆರಿಗೆ ವಿನಾಯಿತಿಗಳು ಸಿಗುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಸ್ವಂತ ಮನೆಯ ಕನಸು ಸಾಕಾರಕ್ಕೆ ಇದು ಸಕಾಲವಾಗಿದೆ. ಸಾಫ್ಟ್‌ವೇರ್‌ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಕೊರೊನಾ ಚೇತರಿಕೆ ಕಂಡುಬಂದು, ಉದ್ಯೋಗಿಗಳಿಗೆ ಕಂಪನಿಗಳು ವೇತನ ಬಡ್ತಿ ನೀಡಿ ಉತ್ತೇಜಿಸುತ್ತಿವೆ. ಹಾಗಾಗಿ ಸ್ವಂತ ಮನೆಯನ್ನು ಹೊಂದುವುದು ಎಚ್‌ಡಿಎಫ್‌ಸಿಯ ಕಡಿಮೆ ಬಡ್ಡಿ ದರದ ಗೃಹ ಸಾಲ ಯೋಜನೆ ಮೂಲಕ ಸುಲಭವಾಗಲಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

BIG NEWS: ಪರಿಷತ್ ನಲ್ಲಿ ಪ್ರತಿಧ್ವನಿಸಿದ ಅಕ್ರಮ ಕಲ್ಲು ಗಣಿಗಾರಿಕೆ; 340 ಕೇಸ್ ಗಳು ಪತ್ತೆ; ಪ್ರಭಾವಿಗಳಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯ ಎಂದ ಜೆಡಿಎಸ್ ಸದಸ್ಯ

ಎಚ್‌ಡಿಎಫ್‌ಸಿ ಜತೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಪಿಎನ್‌ಬಿ, ಬ್ಯಾಂಕ್‌ ಆಫ್‌ ಬರೋಡಾ ಕೂಡ ಗೃಹ ಸಾಲದ ಬಡ್ಡಿ ದರಗಳನ್ನು ಇಳಿಕೆ ಮಾಡಿವೆ. ಮುಖ್ಯವಾಗಿ ‘ಕ್ರೆಡಿಟ್‌ ಸ್ಕೋರ್‌’ ಉತ್ತಮವಾಗಿ ಇರುವವರಿಗೆ ಬಡ್ಡಿ ದರಗಳು ಬಹಳ ಅನುಕೂಲಕರವಾಗಿರಲಿವೆ. ಕೊಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲಿ 6.50%ಗೆ ಗೃಹ ಸಾಲವನ್ನು ನೀಡುವ ಯೋಜನೆ ಪರಿಚಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...