alex Certify ʼಹಬ್ಬʼದ ಸಂಭ್ರಮ ಮತ್ತಷ್ಟು ಹೆಚ್ಚಿಸುತ್ತೆ ನೀವು ಮಾಡುವ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಬ್ಬʼದ ಸಂಭ್ರಮ ಮತ್ತಷ್ಟು ಹೆಚ್ಚಿಸುತ್ತೆ ನೀವು ಮಾಡುವ ಈ ಕೆಲಸ

ಗಣೇಶ ಚತುರ್ಥಿ, ಬಳಿಕ ದಸರಾ, ದೀಪಾವಳಿ ಹೀಗೆಯೇ ಸಾಲು ಸಾಲು ಹಬ್ಬಗಳ ಋತುವು ಶುರುವಾಗಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಮನಗಳಲ್ಲೂ ಸಡಗರ ಮನೆಮಾಡಿದೆ. ಸಂಪ್ರದಾಯದ ಹಬ್ಬಗಳ ಆಚರಣೆ ನಡೆಯುತ್ತಿವೆ. ಬಂಧುಗಳನ್ನು ಭೇಟಿ ಮಾಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು, ಉಡುಗೊರೆಗಳ ವಿನಿಮಯ ಸೇರಿದಂತೆ ಈ ಎರಡು-ಮೂರು ತಿಂಗಳು ಜನರ ಸಂಭ್ರಮಕ್ಕೆ ಕೊನೆಯೇ ಇಲ್ಲ.

ಇವೆಲ್ಲದರ ನಡುವೆಯೂ ನಮ್ಮ ಮನಸ್ಸನ್ನು ಮತ್ತಷ್ಟು ಸಂತಸಪಡಿಸಬಲ್ಲ ಸಣ್ಣ ಉಪಾಯಗಳು, ನಾವಿರಿಸಬೇಕಾದ ಸಣ್ಣ ಹೆಜ್ಜೆಗಳ ಪರಿಚಯ ಹೀಗಿದೆ.

1. ಚಿನ್ನದ ಮೇಲೆ ಹೂಡಿಕೆ

ಹಬ್ಬದ ನೆಪದಲ್ಲಿ ದುಬಾರಿ ಬಟ್ಟೆಗಳು, ಐಷಾರಾಮಿ ಅಲಂಕಾರಿಕ ಉಪಕರಣಗಳ ಖರೀದಿಯ ಬದಲು ಚಿನ್ನವನ್ನು ಅಥವಾ ಚಿನ್ನದ ಅಭರಣಗಳ ಖರೀದಿ ಮಾಡಿದರೆ, ಸಡಗರದ ಜತೆಗೆ ಹಣವನ್ನು ಉತ್ತಮ ಮೌಲ್ಯಕ್ಕೆ ಹೂಡಿಕೆ ಮಾಡಿದಂತೆಯೂ ಆಗುತ್ತದೆ. ಆಭರಣಗಳ ಶುದ್ಧತೆ, ಹಾಲ್‍ಮಾರ್ಕ್‍ಗಳ ಬಗ್ಗೆ ಸ್ವಲ್ಪ ಹೆಚ್ಚಿನ ಜಾಗ್ರತೆ ವಹಿಸಿರಿ.

2. ರಿಯಲ್-ಎಸ್ಟೇಟ್

ಹಬ್ಬದ ನೆಪದಲ್ಲಿ ಅನೇಕ ಕಂಪನಿಗಳು, ಕಾರ್ಖಾನೆಗಳು ತಮ್ಮ ನೌಕರರಿಗೆ ಬೋನಸ್ ಹಾಗೂ ಹಬ್ಬದ ಉಡುಗೊರೆಗಳನ್ನು ನೀಡುತ್ತವೆ. ಈ ಮೊತ್ತದಲ್ಲಿ ಸಾಧ್ಯವಾದರೆ ಸ್ವಂತ ಮನೆ, ಫ್ಲ್ಯಾಟ್ ಅಥವಾ ಸೈಟ್ ಖರೀದಿಗೆ ಹೂಡಿಕೆ ಮಾಡಬಹುದಾಗಿದೆ. ಬಳಿಕ ಪೂರ್ಣ ರೂಪದ ಖರೀದಿಗೆ ಬ್ಯಾಂಕ್‍ಗಳಲ್ಲಿ ಕಡಿಮೆ ಬಡ್ಡಿಗೆ ಲಭ್ಯವಾಗುವ ಗೃಹ ಸಾಲ ಯೋಜನೆಯನ್ನು ಪಡೆಯಬಹುದಾಗಿದೆ.

3. ಕೌಟುಂಬಿಕ ಆರೋಗ್ಯ ವಿಮೆ ಖರೀದಿ

‘ಆರೋಗ್ಯವೇ ಮಹಾಭಾಗ್ಯ’ ಎನ್ನುವುದರಲ್ಲಿ ಈಗಂತೂ ಯಾರಿಗೂ ಕೂಡ ಸಂಶಯವೇ ಉಳಿದಿಲ್ಲ. ಕೊರೊನಾ ಕಾಲಘಟ್ಟದಲ್ಲಿ ಎದುರಾಗುವ ಅನೇಕ ರೀತಿಯ ಒತ್ತಡಗಳಿಂದ ಜೀವನಶೈಲಿ ಏರುಪೇರಾಗಿ ಅನುಭವಿಸುವ ಅನಾರೋಗ್ಯಗಳಿಗೆ ಆಸ್ಪತ್ರೆಗೆ ದಾಖಲಾದಲ್ಲಿ, ಭಾರಿ ವೆಚ್ಚಗಳ ಚಿಂತೆಯನ್ನು ಕಡಿಮೆ ಮಾಡುವುದು ಆರೋಗ್ಯ ವಿಮೆ ಯೋಜನೆ. ನಮ್ಮ ಕುಟುಂಬಕ್ಕೆ ಸೂಕ್ತ ಆರೋಗ್ಯ ವಿಮೆ ಯೋಜನೆ ಒಂದನ್ನು ಈ ಹಬ್ಬದ ವೇಳೆ ಖರೀದಿ ಮಾಡಬಹುದು.

4. ಪುನಶ್ಚೇತನ ಕಾರ್ಯಕ್ರಮ

ಒತ್ತಡದ ಜೀವನಶೈಲಿಯಿಂದ ಈ ಹಬ್ಬದ ವೇಳೆ ಸ್ವಲ್ಪ ಸುಧಾರಿಸಿಕೊಳ್ಳಲು ಯೋಗ, ಪ್ರಕೃತಿ ಚಿಕಿತ್ಸೆ, ಲಾಫ್ಟರ್ ಥೆರಪಿಗಳಂತಹ ಆರೋಗ್ಯ-ಮನಸ್ಸಿನ ಪುನಶ್ಚೇತನ ಕಾರ್ಯಕ್ರಮಗಳತ್ತ ಗಮನಹರಿಸಬಹುದು. ಹಬ್ಬದಲ್ಲಿ ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ವಿಶೇಷ ಉಡುಗೊರೆ ಇದು.

5. ಮನೆಯವರೊಂದಿಗೆ ಕಳೆಯುವ ಅಮೂಲ್ಯ ಕ್ಷಣ

ಕುಟುಂಬದವರೊಂದಿಗೆ, ಆಪ್ತ ಸಂಬಂಧಿಕರೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಸಮಯವೇ ಸಿಗುತ್ತಿಲ್ಲ. ಈ ಹಬ್ಬದ ವೇಳೆ ಕುಟುಂಬದವರನ್ನು ಕರೆದುಕೊಂಡು, ಸಮೀಪದ ಪ್ರವಾಸ ಅಥವಾ ಮನರಂಜನಾ ಸ್ಥಳಕ್ಕೆ ಭೇಟಿ ನೀಡಿದರೆ ಬಾಂಧವ್ಯ ಸುಧಾರಣೆಗೆ ನೆರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...