alex Certify ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹತ್ಯೆಗೈದು ಕೊಟ್ಟಿಗೆಯಲ್ಲಿ ಹೂತಿಟ್ಟ ಪ್ರಿಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹತ್ಯೆಗೈದು ಕೊಟ್ಟಿಗೆಯಲ್ಲಿ ಹೂತಿಟ್ಟ ಪ್ರಿಯಕರ

ಪಾಣಿಪತ್: ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಪತಿಯನ್ನು ಕೊಂದು ಶವವನ್ನು ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದಾನೆ.

ಸಮಲ್ಖಾ ಉಪಜಿಲ್ಲೆ ವ್ಯಾಪ್ತಿಯ ಪ್ಯಾಟಿ ಕಲ್ಯಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ರವಿ(35) ಎಂದು ಗುರುತಿಸಲಾಗಿದೆ. ಪತ್ತಿ ಕಲ್ಲನ್ ಗ್ರಾಮದ ನಿವಾಸಿಯಾಗಿರುವ ರವಿ ಡಿಸೆಂಬರ್ 11 ರಂದು ನಾಪತ್ತೆಯಾಗಿದ್ದು, ಭಾನುವಾರ ಆರೋಪಿ ಪರ್ವೀನ್‌ ನ ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದೆ. ರವಿ ಪತ್ನಿಯೊಂದಿಗೆ ಪರ್ವೀನ್ ಅಕ್ರಮ ಸಂಬಂಧ ಹೊಂದಿದ್ದ. ಇತ್ತೀಚೆಗೆ ರವಿಗೆ ಪರ್ವೀನ್ ಮತ್ತು ಅವನ ಹೆಂಡತಿಯ ನಡುವಿನ ಸಂಬಂಧದ ಬಗ್ಗೆ ತಿಳಿದಿತ್ತು.

ಮೃತನ ಕುಟುಂಬ ಸದಸ್ಯರ ಪ್ರಕಾರ, ಕಾರ್ ಖರೀದಿಸಲು ಡಿಸೆಂಬರ್ 11 ರಂದು ಕರ್ನಾಲ್‌ ಗೆ ಹೋಗಿದ್ದ ರವಿ ಹಿಂತಿರುಗಲಿಲ್ಲ. ಬಳಿಕ ನಾಪತ್ತೆ ದೂರು ದಾಖಲಾಗಿತ್ತು. ರವಿಯನ್ನು ಮದ್ಯಪಾನ ಮಾಡಲು ತನ್ನ ಮನೆಗೆ ಕರೆಸಿಕೊಂಡಿದ್ದ ಪರ್ವೀನ್ ವಿಷ ಮಿಶ್ರಿತ ವಸ್ತುವನ್ನು ಕುಡಿಸಿ ತಲೆಗೆ ಹೊಡೆದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ರವಿಯ ಶವವನ್ನು ಕೊಟ್ಟಿಗೆಯಲ್ಲಿ ಹೂತು ಹಾಕಿದ್ದಾನೆ. ಪರ್ವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...