alex Certify 7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ…!

ಪ್ರೀತಿ ಕುರುಡು ಎನ್ನುತ್ತಾರೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿಯ ಗಡಿಯಿಲ್ಲ. ಇದಕ್ಕೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 19 ವರ್ಷದ ಹುಡುಗಿ 7 ಮಕ್ಕಳ ತಂದೆಯಾಗಿರುವ 67 ವರ್ಷದ ವ್ಯಕ್ತಿಯ ಪ್ರೀತಿಗೆ ಬಿದ್ದಿದ್ದಾಳೆ. ಇಷ್ಟೇ ಅಲ್ಲ ಇಬ್ಬರೂ ಮದುವೆಯಾಗಿದ್ದಾರೆ. ನಂತ್ರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಹೋಗಿ, ತಮಗೆ ರಕ್ಷಣೆ ಬೇಕೆಂದು ಮನವಿ ಸಲ್ಲಿಸಿದ್ದಾರೆ.

ವರದಿ ಪ್ರಕಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಬಗ್ಗೆ ಅನುಮಾನಿಸಿ ತನಿಖೆಗೆ ಆದೇಶ ನೀಡಿತ್ತು. ಇದರ ನಂತರ ಪೊಲೀಸರು ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಮದುವೆಗೆ ಹುಡುಗಿಯ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಪಲ್ವಾಲ್ ಎಸ್ಪಿ ದೀಪಕ್ ಗೆಹ್ಲಾವತ್ ಹೈಕೋರ್ಟ್ ನಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ತಾಯಿಯ ಒಪ್ಪಿಗೆಯ ಮೇರೆಗೆ ಈ ಮದುವೆಯನ್ನು ಮಾಡಿಕೊಂಡಿದ್ದಾಳೆಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ಪ್ರಕಾರ, 67 ವರ್ಷದ ವ್ಯಕ್ತಿಗೆ 7 ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಪತ್ನಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. ಹುಡುಗಿ ಕೂಡ ಈಗಾಗಲೇ ಮದುವೆಯಾಗಿದ್ದಾಳೆ. ಆದ್ರೆ ಆಕೆಗೆ ಮಕ್ಕಳಿಲ್ಲ. ವಿಚ್ಛೇದನ ಪಡೆಯದೆ ಆಕೆ ಮದುವೆಯಾಗಿದ್ದಾಳಂತೆ. ಆಕೆ ಪತಿ ಇದನ್ನು ವಿರೋಧಿಸುವುದಿಲ್ಲ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...