alex Certify ವಿಂಬಲ್ಡನ್ ನಲ್ಲಿ ನಡೆದಿದ್ದ ತಮಾಷೆಯ ವಿಡಿಯೋ ಹಂಚಿಕೊಂಡ ಗೊಯೆಂಕಾ: ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಂಬಲ್ಡನ್ ನಲ್ಲಿ ನಡೆದಿದ್ದ ತಮಾಷೆಯ ವಿಡಿಯೋ ಹಂಚಿಕೊಂಡ ಗೊಯೆಂಕಾ: ಹಳೆ ವಿಡಿಯೋ ಮತ್ತೆ ವೈರಲ್

2014ರಲ್ಲಿ ನಡೆದ ವಿಂಬಲ್ಡನ್ ಪಂದ್ಯದ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಇದನ್ನು ಹರ್ಷ ಗೊಯೆಂಕಾ ಅವರು ಹಂಚಿಕೊಂಡಿದ್ದಾರೆ. ಇದು ವಿಂಬಲ್ಡನ್ ನಲ್ಲಿ ನಡೆದ ಮಹಿಳೆಯರ ಡಬಲ್ಸ್ ಮೊದಲ ಸುತ್ತಿನ ಪಂದ್ಯವಾಗಿತ್ತು. ಸದ್ಯ ತಮಾಷೆಯೆನಿಸುವ ಈ ವಿಡಿಯೋ ನೋಡಿದ ನೆಟ್ಟಿಗರು ನಗೆ‌ ಬೀರಿದ್ದಾರೆ.

ಸೆರೆನಾ ವಿಲಿಯಮ್ಸ್ ತನ್ನ ಸಹೋದರಿ ವೀನಸ್ ಜೊತೆ ಜಾರ್ಜಿಯನ್ ಒಕ್ಸಾನಾ ಕಲಾಶ್ನಿಕೋವಾ ಹಾಗೂ ಉಕ್ರೇನಿಯನ್ ಓಲ್ಗಾ ಸಾವ್ಚುಕ್ ವಿರುದ್ಧ ಸ್ಪರ್ಧಿಸುತ್ತಿದ್ದರು. ಭಾರಿ ಜಿದ್ದಾಜಿದ್ದಿ ತುಂಬಿದ್ದ ಈ ಪಂದ್ಯದಲ್ಲಿ ಸೆರೆನಾ ಚೆಂಡು ಪಡೆಯಲು ಮುಂಭಾಗ ಕುಳಿತಿದ್ದ ಪ್ರೇಕ್ಷಕರತ್ತ ಹಾರಿ ಬಿದ್ದಿದ್ದಾರೆ. ಪ್ರೇಕ್ಷಕರಲ್ಲಿ ಒಬ್ಬರು ಟೆನ್ನಿಸ್ ತಾರೆಯನ್ನು ಹಿಡಿಯಲು ಶಕ್ತರಾದರು. ನಂತರ ಸೆರೆನಾ ಜೋರಾಗಿ ನಕ್ಕಿದ್ದಾರೆ.

6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸದ್ಯ ಈ ಹಳೆ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅದಕ್ಕೆ ಮುಂಭಾಗದ ಆಸನವು ದುಬಾರಿಯಾಗಿದೆ ಅಂತಾ ಹೇಳುವುದು ಸುಳ್ಳಲ್ಲ ಅಂತೆಲ್ಲಾ ರೀಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...