alex Certify 6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರೌಢಶಿಕ್ಷಣ ನಿರ್ದೇಶನಾಲಯ(ಡಿಎಸ್‌ಇ), ಒಡಿಶಾ ವತಿಯಿಂದ ವಿವಿಧ ವಿಷಯಗಳಿಗೆ ತರಬೇತಿ ಪಡೆದ ಶಿಕ್ಷಕ(ಟಿಜಿಟಿ) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು.

ಕಲೆ, ವಿಜ್ಞಾನ(PCM), ವಿಜ್ಞಾನ(CBZ) ಮತ್ತು ತೆಲುಗು ಶಿಕ್ಷಕರಿಗೆ ಒಡಿಶಾದ ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ ಒಟ್ಟು 6720 ಹುದ್ದೆಗಳಿದ್ದು, ಇವುಗಳಿಗೆ ನೇಮಕಾತಿ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ dseodisha.in ನಲ್ಲಿ ಅರ್ಜಿ ಸಲ್ಲಿಸಬಹುದು.

ಟಿಜಿಟಿ ನೇಮಕಾತಿ ಹುದ್ದೆಯ ವಿವರ:

ಟಿಜಿಟಿ ಕಲೆ – 3136

TGT ವಿಜ್ಞಾನ (PCM) – 1842

TGT ವಿಜ್ಞಾನ (CBZ) – 1717

ತೆಲುಗು ಶಿಕ್ಷಕ – 25

 

ನೇಮಕಾತಿ ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ – ಸೆಪ್ಟೆಂಬರ್ 4, 2021 (ಬೆಳಿಗ್ಗೆ 11)

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2021 (ಸಂಜೆ 6)

ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: ಅಕ್ಟೋಬರ್ 2021 ರ ಎರಡನೇ ವಾರ

 

ವಯೋಮಿತಿ ವಿವರ

ಅಭ್ಯರ್ಥಿಯು 21 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಜನವರಿ 1, 2021 ಕ್ಕೆ 32 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಾರದು.

ವೇತನ

ಆಯ್ಕೆಯಾದ ಶಿಕ್ಷಕರಿಗೆ ತಿಂಗಳಿಗೆ 16,880 ರೂ.ಗಳ ಕ್ರೋಢೀಕೃತ ಮೊತ್ತವನ್ನು ನೀಡಲಾಗುತ್ತದೆ.

ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಯು ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...