alex Certify ಎ.ಆರ್. ರೆಹಮಾನ್ ಹಾಡಿರುವ ಮಾ ತುಜೆ ಸಲಾಮ್ ಗೀತೆಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ.ಆರ್. ರೆಹಮಾನ್ ಹಾಡಿರುವ ಮಾ ತುಜೆ ಸಲಾಮ್ ಗೀತೆಗೆ ಮನಸೋತ ನೆಟ್ಟಿಗರು

ನಟಿ ಸಿಮಿ ಗರೆವಾಲ್ ಅವರು ತಮ್ಮ ಜನಪ್ರಿಯ ಚಾಟ್ ಶೋ ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್‌ನಿಂದ ಮಿಲಿಯನ್ ಡಾಲರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿರೂಪಕರು ಮತ್ತು ಅತಿಥಿ ಸಂಚಿಕೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆ, ರೆಹಮಾನ್ ಮಾ ತುಜೆ ಸಲಾಮ್ ಹಾಡಿದ್ದಾರೆ. ಆಗಸ್ಟ್ 15 ರಂದು ಸಿಮಿ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ, ಉದ್ಯಮಿ ಹರ್ಷ್ ಗೋಯೆಂಕಾ ಈ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ.

ಸಂಗೀತಗಾರ ಮಾ ತುಜೆ ಸಲಾಮ್ ಅನ್ನು ಹಾಡುತ್ತಿರುವುದನ್ನು ಮತ್ತು ಸಿಮಿ ಬಹಳ ತಲ್ಲೀನತೆಯಿಂದ ಕೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ರೆಹಮಾನ್ ಅವರ ಕೆಲವು ಬಾಲ್ಯದ ಫೋಟೋಗಳನ್ನು ಸಹ ನೋಡಬಹುದು. ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಹಜವಾಗಿ, ಕಾಮೆಂಟ್‌ಗಳ ವಿಭಾಗವು ಪ್ರಶಂಸೆಗಳಿಂದ ತುಂಬಿದೆ.

ಭಾರತೀಯ ಸಂಗೀತಕ್ಕೆ ರೆಹಮಾನ್ ಅಪಾರ ಕೊಡುಗೆ ನೀಡಿದ್ದಾರೆ. ನಾವು ಅವರನ್ನು ಪ್ರೀತಿಸುತ್ತೇವೆ. ಹೊಸ ಪ್ರತಿಭೆಯ ಪರಿಶೋಧಕ ಮತ್ತು ಬಹಳ ಸರಳ ವ್ಯಕ್ತಿ ಇವರಾಗಿದ್ದಾರೆ. ಭಾರತವು ಪ್ರತಿಭೆಯ ಸಾಗರವಾಗಿದೆ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...