alex Certify ಜಾಗ್ವಾರ್‌ ನಲ್ಲಿ ʼಹರ್​ ಘರ್​ ತಿರಂಗಾʼ ಮೇನಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗ್ವಾರ್‌ ನಲ್ಲಿ ʼಹರ್​ ಘರ್​ ತಿರಂಗಾʼ ಮೇನಿಯಾ

ಗುಜರಾತ್​ನ ಯುವಕನೊಬ್ಬ ತನ್ನ 71.60 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್​ ಎಕ್ಸ್​ಎಫ್​ನ ಹೊರಭಾಗವನ್ನು ಭಾರತದ ಧ್ವಜದಂತೆ ಕಾಣುವಂತೆ ತ್ರಿವರ್ಣದಲ್ಲಿ ಅಲಂಕರಿಸಿದ್ದಾನೆ.

ಸಿದ್ಧಾರ್ಥ್​ ಜೋಷಿ ಎಂಬಾತ ತನ್ನ ಕಾರಿನ ನೋಟವನ್ನು ಮಾರ್ಪಾಡು ಮಾಡಲು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂಬುದು ಗಮನಿಸಬೇಕಾದ ಸಂಗತಿ. ವರದಿಗಳ ಆಧಾರದ ಮೇಲೆ ʼಹರ್​ ಘರ್​ ತಿರಂಗಾʼ ಅಭಿಯಾನವನ್ನು ಬೆಂಬಲಿಸಲು ತನ್ನ ಐಷಾರಾಮಿ ಸೆಡಾನ್​ನಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಭಾರತದ ಧ್ವಜವನ್ನು ಮನೆ ಮನೆಯಲ್ಲಿ ಹಾರಿಸಲು ʼಆಜಾದಿ ಕಾ ಅಮೃತ್​ ಮಹೋತ್ಸವʼದಲ್ಲಿ ಪ್ರಚಾರ ಮಾಡಿದ್ದು, ಇದರಿಂದ ಪ್ರೇರಿತನಾದ ಯುವಕ ಈ ರೀತಿ ಮಾಡಿದ್ದಾನೆ.

ಇದಲ್ಲದೆ, ಹರ್​ ಘರ್​ ತಿರಂಗಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಗುಜರಾತ್​ನ ಸೂರತ್​ನಿಂದ ದೆಹಲಿಗೆ ಕಾರಿನಲ್ಲಿ ಹೋಗಿಬಂದಿದ್ದಾಗಿಯೂ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಪ್ರಯತ್ನ ನಡೆಸಿದ್ದಾನೆ.

ಆತ ಹೊಂದಿರುವ ಜಾಗ್ವಾರ್​ ಎಕ್ಸ್​ಎಫ್​ನ ಮುಂಭಾಗದ ಬಾನೆಟ್​ ಮತ್ತು ಸೈಡ್​ ಪ್ಯಾನೆಲ್​ ಕೇಸರಿ ಬಣ್ಣ ಆವರಿಸಿದೆ. ಅದರ ನಂತರ ಬದಿಗಳಲ್ಲಿ ಬಿಳಿ ಮತ್ತು ಕಾರಿನ ಹಿಂಭಾಗದ ತುದಿಯಲ್ಲಿ ಹಸಿರು ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...