alex Certify BIG NEWS: ರಾಮನಗರವನ್ನು ಬೆಂಗಳೂರಲ್ಲ ‘ಡೆಲ್ಲಿ’ ಎಂದು ಹೆಸರಿಡಿ; ಯಾರು ಬೇಡ ಅಂದವರು? ಟಾಂಗ್ ನೀಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಮನಗರವನ್ನು ಬೆಂಗಳೂರಲ್ಲ ‘ಡೆಲ್ಲಿ’ ಎಂದು ಹೆಸರಿಡಿ; ಯಾರು ಬೇಡ ಅಂದವರು? ಟಾಂಗ್ ನೀಡಿದ HDK

ರಾಮನಗರ: ರಾಮನಗರ ಜಿಲ್ಲೆಯ ಹೆಸರು ಬದಲಿಸುವ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಮನಗರವನ್ನು ಬೆಂಗಳೂರು ಬದಲು ಡೆಲ್ಲಿ ಎಂದು ಹೆಸರಿಡಿ. ಯಾರು ಬೇಡ ಅಂದವರು? ಎಂದು ಪ್ರಶ್ನಿಸಿದ್ದಾರೆ.

ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಮನಗರವನ್ನು ಡೆಲ್ಲಿ ಎಂದು ಹೆಸರಿಡಲಿ. ಆಗ ವಿಶ್ವಮಟ್ಟದಲ್ಲಿ ಹೆಸರಾಗುತ್ತಲ್ಲ. ಸ್ವಲ್ಪ ಮಳೆಯಾದರೂ ಸಾಕು ಎಂತಹ ಗ್ರೇಟರ್ ಬೆಂಗಳೂರು ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ಹೆಸರು ಬದಲಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಟಾಂಗ್ ನೀಡಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...