alex Certify ಮಟರ್​ ಪನ್ನೀರ್​ ಬದಲು ಚಿಕನ್​ ಪನ್ನೀರ್​ ನೀಡಿದ ರೆಸ್ಟೋರೆಂಟ್ ಗೆ 20 ಸಾವಿರ ರೂ. ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಟರ್​ ಪನ್ನೀರ್​ ಬದಲು ಚಿಕನ್​ ಪನ್ನೀರ್​ ನೀಡಿದ ರೆಸ್ಟೋರೆಂಟ್ ಗೆ 20 ಸಾವಿರ ರೂ. ದಂಡ..!

ಫುಡ್​ ಡೆಲಿವರಿ ಆಪ್​ಗಳು ನಮ್ಮ ಕೆಲಸವನ್ನು ತುಂಬಾನೆ ಸುಲಭವಾಗಿಸಿವೆ. ಆದರೆ ಕೆಲವೊಮ್ಮೆ ಈ ಫುಡ್​ ಡೆಲಿವರಿ ಆ್ಯಪ್​ಗಳು ನಮಗೆ ತೊಂದರೆಯನ್ನೂ ಕೊಡಬಹುದು. ಈ ಮಾತಿಗೆ ಸಾಕ್ಷಿ ಎಂಬಂತ ಘಟನೆಯೊಂದು ಮಧ್ಯ ಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಜಿವಾಜಿ ಕ್ಲಬ್​​ ಎಂಬ ಹೆಸರಿನ ರೆಸ್ಟೋರೆಂಟ್ ಮಟರ್ ಪನ್ನೀರ್ ಆರ್ಡರ್​ ಮಾಡಿದ್ದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್​ ಕರ್ರಿ ವಿತರಿಸಿದ್ದು ಇದಕ್ಕಾಗಿ 20 ಸಾವಿರ ರೂಪಾಯಿ ದಂಡ ತೆತ್ತಿದೆ.

ಜಿವಾಜಿ ಕ್ಲಬ್​ನ ಸದಸ್ಯರೂ ಆಗಿರುವ ವಕೀಲ ಸಿದ್ಧಾರ್ಥ ಶ್ರೀವಾತ್ಸವ ಡೆಲಿವರಿ ಅಪ್ಲಿಕೇಶನ್​ ಮೂಲಕ ಮಟರ್​ ಪನ್ನೀರ್ ಆರ್ಡರ್​ ಮಾಡಿದ್ದರು. ಆದರೆ ಆರ್ಡರ್​ ರೂಪದಲ್ಲಿ ಬಂದಿದ್ದ ಚಿಕನ್​ ಕರ್ರಿ ಕಂಡು ಶುದ್ಧ ಸಸ್ಯಾಹಾರಿ ಕುಟುಂಬ ಆಘಾತಗೊಂಡಿತ್ತು. ಇದಾದ ಬಳಿಕ ಗ್ರಾಹಕರ ರಕ್ಷಣಾ ವೇದಿಕೆಯ ಕದ ತಟ್ಟಿದ್ದ ಸಿದ್ಧಾರ್ಥ್ ಶ್ರೀವಾತ್ಸವ್​ ಪರಿಹಾರ ರೂಪದಲ್ಲಿ 20 ಸಾವಿರ ರೂಪಾಯಿ ಪಡೆದಿದ್ದಾರೆ.

ಈ ಘಟನೆಯಿಂದ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಹಾನಿಯಾಗಿದೆ ಎಂದು ವೇದಿಕೆ ಗಮನಿಸಿದ ಗ್ರಾಹಕ ರಕ್ಷಣಾ ವೇದಿಕೆಯು ಜಿವಾಜಿ ಕ್ಲಬ್​ಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಹಾಗೂ ಕಾನೂನು ಹೋರಾಟದ ಸಂದರ್ಭದಲ್ಲಿ ದೂರುದಾರ ಮಾಡಿರುವ ಖರ್ಚಿನ ಸಂಪೂರ್ಣ ಜವಾಬ್ದಾರಿಯನ್ನೂ ರೆಸ್ಟೋರೆಂಟ್ ಹೊರತಕ್ಕದ್ದು ಎಂದು ಹೇಳಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...