alex Certify ಪ್ರವಾಸದ ಮೋಜು ಮಾಡುತ್ತಿದ್ದ ಗೆಳೆಯ: ಅವನ ಪರವಾಗಿ ಪರೀಕ್ಷೆ ಬರೆದು ಸಿಕ್ಕಿಬಿದ್ದ ಗೆಳತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸದ ಮೋಜು ಮಾಡುತ್ತಿದ್ದ ಗೆಳೆಯ: ಅವನ ಪರವಾಗಿ ಪರೀಕ್ಷೆ ಬರೆದು ಸಿಕ್ಕಿಬಿದ್ದ ಗೆಳತಿ…!

ಅಹಮದಾಬಾದ್‌ (ಗುಜರಾತ್): ಉತ್ತರಾಖಂಡ ಪ್ರವಾಸದಲ್ಲಿದ್ದ ಗೆಳೆಯನ ಪರವಾಗಿ ಪರೀಕ್ಷೆ ಬರೆದ ಸ್ನೇಹಿತೆಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಗುಜರಾತ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸದ ಮೋಜಿನಲ್ಲಿದ್ದ ಸ್ನೇಹಿತನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಕುಳಿತಿದ್ದಳು ಈ ಯುವತಿ.

ಈಗ ಸಿಕ್ಕಿಬಿದ್ದಿರುವ ಕಾರಣ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಸ್ನೇಹಿತ ಬಿಕಾಂನಲ್ಲಿ ಫೇಲ್‌ ಆಗಿದ್ದರಿಂದ ಬಿಕಾಂ ಮುಗಿಸಿದ್ದ ಸ್ನೇಹಿತೆ ಹೀಗೆ ಮಾಡಿದ್ದಾಳೆ.

ಅಧಿಕಾರಿಗಳ ಪ್ರಕಾರ ಇವರಿಬ್ಬರೂ ಸ್ನೇಹಿತರು. ಆಕೆಯ ಈ ಕ್ರಮದ ಬಗ್ಗೆ ಪೋಷಕರಿಗೆ ತಿಳಿದಿರಲಿಲ್ಲ. ಹಾಲ್ ಟಿಕೆಟ್ ಅನ್ನು ಬದಲಾಯಿಸಿದ್ದಾಳೆ. ಹಾಲ್ ಟಿಕೇಟ್ ನಲ್ಲಿ ಅವನ ಫೋಟೋದ ಜಾಗದಲ್ಲಿ ತನ್ನದೇ ಫೋಟೋ ಹಾಕಿ ಹೆಸರಿಗೆ ಸಣ್ಣ ಬದಲಾವಣೆ ಮಾಡಿಕೊಂಡಿದ್ದಳು. ಆದರೆ ಇವಳ ಆಟ ನಡೆಯಲಿಲ್ಲ, ಸಿಕ್ಕಿಬಿದ್ದಿದ್ದಾಳೆ.

ಯುವತಿ ಸಿಕ್ಕಿಬಿದ್ದ ಬಳಿಕ ಗೆಳೆಯನನ್ನು ಕರೆಸಿ ಆತನ ವಿರುದ್ಧವೂ ಕೇಸ್‌ ದಾಖಲು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಈಗ ಯುವತಿ ತನ್ನ ಬಿ.ಕಾಂ. ಪದವಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ, ಜತೆಗೆ, ಎಲ್ಲಿಯೂ ಆಕೆಗೆ ಕೆಲಸವೂ ಸಿಗದೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...