alex Certify ಅತ್ತಿಗೆ ಮಲಗಿದ ನಂತ್ರ ರೂಮ್ ಗೆ ಬರ್ತಿದ್ದ ಅಣ್ಣ, ಪಿರಿಯಡ್ಸ್ ಆಗದಿದ್ದಾಗ ಬಯಲಾಯ್ತು ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆ ಮಲಗಿದ ನಂತ್ರ ರೂಮ್ ಗೆ ಬರ್ತಿದ್ದ ಅಣ್ಣ, ಪಿರಿಯಡ್ಸ್ ಆಗದಿದ್ದಾಗ ಬಯಲಾಯ್ತು ಆಘಾತಕಾರಿ ಕೃತ್ಯ

ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪೋಷಕರ ನಿಧನದ ನಂತರ ಸಹೋದರನೇ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಬೆಳಕಿಗೆ ಬಂದಿದೆ.

ಮೂರು ವರ್ಷ ತನ್ನ ಸಹೋದರ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿರುವುದಾಗಿ ನೊಂದ ಬಾಲಕಿ ಸರ್ಕೇಜ್ ಪೊಲೀಸರಿಗೆ ದೂರು ನೀಡಿದ್ದಾಳೆ. ಗುಜರಾತ್ ನ ಅಹಮದಾಬಾದ್ ಮಕರಬಾ ಪ್ರದೇಶದಲ್ಲಿ ಘಟನೆ ನಡೆದಿದೆ.

15 ವರ್ಷದ ಸಂತ್ರಸ್ತೆಯ ಮೇಲೆ 26 ವರ್ಷದ ಅಣ್ಣ ಇಂತಹ ಕೃತ್ಯ ಎಸಗಿದ್ದಾನೆ. ಆತನೇ ಏಕೈಕ ರಕ್ಷಕನಾಗಿದ್ದ ಕಾರಣ ಹುಡುಗಿ ಮೌನವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ತಿಂಗಳಾದರೂ ಪಿರಿಯಡ್ಸ್ ಆಗದಿದ್ದಾಗ ಯುವತಿ ತನ್ನ ಅತ್ತಿಗೆಯ ತಾಯಿಗೆ ವಿಷಯ ತಿಳಿಸಿದ್ದಾಳೆ. ಅತ್ತಿಗೆಗೂ ಮಾಹಿತಿ ನೀಡಿದ್ದಾರೆ. ಬಳಿಕ ವಿಷಯ ಬೆಳಕಿಗೆ ಬಂದಿದೆ.

ಮಕರಬಾ ಪ್ರದೇಶದ ಬಾಡಿಗೆ ಮನೆಯಲ್ಲಿ ಹುಡುಗಿ ತನ್ನ ಅಣ್ಣ, ಅತ್ತಿಗೆಯೊಂದಿಗೆ ವಾಸವಾಗಿದ್ದು, 2019 ರ ಜನವರಿ 29 ರಂದು ಬಾಲಕಿ ತನ್ನ ಕೋಣೆಯಲ್ಲಿ ಮಲಗಿದ್ದ ವೇಳೆ ಅಲ್ಲಿಗೆ ಬಂದ ಅಣ್ಣ ಬಲವಂತವಾಗಿ ಅತ್ಯಾಚಾರ ಎಸಗಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಇದೇ ರೀತಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ಹುಡುಗಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮತ್ತು ಆತನ ಪತ್ನಿ ಮಲಗಿದ್ದ ವೇಳೆ ಅತ್ಯಾಚಾರ ಎಸಗಿದ್ದು, ಆತನನ್ನು ಬಿಟ್ಟರೆ ತನಗ್ಯಾರೂ ಇಲ್ಲದ ಕಾರಣ ಹುಡುಗಿ ಸಹಿಸಿಕೊಂಡಿದ್ದಾಳೆ. 3 ತಿಂಗಳು ಪೀರಿಯಡ್ಸ್ ಆಗದ ನಂತರ ಆಕೆ ತನ್ನ ಅತ್ತಿಗೆ ಮತ್ತು ಅತ್ತಿಗೆಯ ತಾಯಿಗೆ ವಿಷಯ ತಿಳಿಸಿದ್ದು, ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೈನಂದಿನ ಕೂಲಿ ಕಾರ್ಮಿಕರಾಗಿರುವ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...