alex Certify 1 ರೂಪಾಯಿ ನಾಣ್ಯಗಳಲ್ಲಿ ಠೇವಣಿ ನೀಡಿದ ಪಕ್ಷೇತರ ಅಭ್ಯರ್ಥಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ರೂಪಾಯಿ ನಾಣ್ಯಗಳಲ್ಲಿ ಠೇವಣಿ ನೀಡಿದ ಪಕ್ಷೇತರ ಅಭ್ಯರ್ಥಿ…!

ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಸಹ ಪೈಪೋಟಿ ನೀಡುತ್ತಿವೆ. ಇದರ ಮಧ್ಯೆ ಪಕ್ಷೇತರ ಅಭ್ಯರ್ಥಿ ಒಬ್ಬರು ಒಂದು ರೂಪಾಯಿ ನಾಣ್ಯಗಳಲ್ಲಿ ಠೇವಣಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಗಾಂಧಿನಗರ ಉತ್ತರ ಕ್ಷೇತ್ರದಿಂದ ದಿನಗೂಲಿ ಕಾರ್ಮಿಕ ಮಹೇಂದ್ರ ಪಾಟನಿ ಎಂಬವರು ತಮ್ಮ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಠೇವಣಿ 10,000 ರೂ.ಗಳನ್ನು ಒಂದು ರೂಪಾಯಿ ನಾಣ್ಯಗಳಲ್ಲಿ ನೀಡಿದ್ದಾರೆ.

2019ರಲ್ಲಿ ಇವರು ವಾಸಿಸುತ್ತಿದ್ದ ಕೊಳಗೇರಿ ಕಾಲೋನಿಯನ್ನು ಹೋಟೆಲ್ ನಿರ್ಮಾಣ ಮಾಡುವ ಸಲುವಾಗಿ ತೆರವುಗೊಳಿಸಿದ್ದು, ಇಲ್ಲಿ ನೆಲೆಸಿದ್ದ 521 ಗುಡಿಸಲುಗಳು ನೆಲಸಮವಾಗಿದ್ದವು. ಸಂತ್ರಸ್ತ ನಿವಾಸಿಗಳು ತಮ್ಮ ಪ್ರತಿನಿಧಿಯಾಗಿ ಮಹೇಂದ್ರ ಪಾಟನಿಯವರನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...