alex Certify BREAKING NEWS: ಘೋರ ದುರಂತ; ಹೆದ್ದಾರಿಯಲ್ಲಿ ಆಕ್ಸಿಡೆಂಟ್ ನೋಡ್ತಿದ್ದವರ ಮೇಲೆ ಹರಿದ ಕಾರ್: 9 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಘೋರ ದುರಂತ; ಹೆದ್ದಾರಿಯಲ್ಲಿ ಆಕ್ಸಿಡೆಂಟ್ ನೋಡ್ತಿದ್ದವರ ಮೇಲೆ ಹರಿದ ಕಾರ್: 9 ಜನ ಸಾವು

ಗುಜರಾತ್ ನ ಅಹ್ಮದಾಬಾದ್ -ಎಸ್‌ಜಿ ಹೆದ್ದಾರಿಯಲ್ಲಿ ಜನರ ಮೇಲೆ ಜಾಗ್ವಾರ್ ಕಾರ್ ಹರಿದು 9 ಜನ ಸಾವು ಕಂಡಿದ್ದು, ಹಲವರು ಗಾಯಗೊಂಡಿದ್ದಾರೆ

ಅತಿವೇಗದಿಂದ ಬಂದ ಜಾಗ್ವಾರ್ ಕಾರ್ ಜನರ ಮೇಲೆ ನುಗ್ಗಿದೆ. ಕಾರ್ ಡಿಕ್ಕಿ ಹೊಡೆದು ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಮತ್ತು ಥಾರ್ ನಡುವೆ ಅಪಘಾತ ಸಂಭವಿಸಿದ ನಂತರ ಜನರು ಹೆದ್ದಾರಿಯಲ್ಲಿ ನೋಡುತ್ತಾ ನಿಂತಿದ್ದಾಗ ಈ ಘಟನೆ ಸಂಭವಿಸಿದೆ.

ಅಪಘಾತದ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಅಪಘಾತದ ನಂತರ ಹೆದ್ದಾರಿಯಲ್ಲಿ ಜನ ಜಮಾಯಿಸಿದ್ದರು. ಅಷ್ಟರಲ್ಲಿ ಹಿಂದಿನಿಂದ ಜಾಗ್ವಾರ್ ಕಾರು ಬಂದು ಜನರ ಮೇಲೆ ನುಗ್ಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...