alex Certify ಲಸಿಕಾ ಕೇಂದ್ರದಲ್ಲೇ ಮನದನ್ನೆಗೆ ಪ್ರೇಮ ನಿವೇದನೆ ಮಾಡಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕಾ ಕೇಂದ್ರದಲ್ಲೇ ಮನದನ್ನೆಗೆ ಪ್ರೇಮ ನಿವೇದನೆ ಮಾಡಿದ ಯುವಕ

ಕೆನಡಾದ ಒಂಟಾರಿಯೋದ ಗೆಲ್ಫ್‌ ಎಂಬ ಪಟ್ಟಣದ ಜೋಡಿಯೊಂದು ಕೋವಿಡ್ ಲಸಿಕಾ ಕೇಂದ್ರವೊಂದರಲ್ಲಿ ಎಂಗೇಜ್ ಆಗುವ ಮೂಲಕ ಸದ್ದು ಮಾಡಿದ್ದಾರೆ.

ಕೇಂಬ್ರಿಡ್ಜ್‌ನಲ್ಲಿ ಕೆಲಸ ಮಾಡುವ ರ‍್ಯಾನ್ ಗಾಲ್ವೇ, ಆತನ ಆರು ವರ್ಷಗಳ ಗರ್ಲ್‌ಫ್ರೆಂಡ್ ಜೋಕೆಲಿನ್ ರಾಶ್‌ಫ್ಲೇಜ಼್‌‌ಗೆ, ತನ್ನ ಪ್ರೇಮನಿವೇದನೆ ಮಾಡಿಕೊಳ್ಳಲು ಇಲ್ಲಿನ ಪೈನ್‌ಬುಶ್‌ ಲಸಿಕಾ ಕೇಂದ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಿಯತಮೆಗೆ ಉಡುಗೊರೆ ಕೊಡಲು ದರೋಡೆಗಿಳಿದ ಯುವಕ

“ನಮ್ಮ ಬಹಳಷ್ಟು ಸ್ನೇಹಿತರು ಹಾಗೂ ಕುಟುಂಬಸ್ಥರು ನಮ್ಮೊಂದಿಗೆ ಕೆಲಸ ಮಾಡುವ ಕಾರಣ ಆಕೆಗೆ ಕ್ಲಿನಿಕ್‌ನಲ್ಲೇ ಪ್ರಪೋಸ್ ಮಾಡುವ ಐಡಿಯಾ ನನಗೆ ಕೆಲ ತಿಂಗಳ ಹಿಂದೆಯೇ ಮನಸ್ಸಿಗೆ ಬಂದಿತ್ತು” ಎಂದು ಗಾಲ್ವೇ ತಿಳಿಸಿದ್ದಾರೆ.

ಈ ಜೋಡಿಯ ಮಧುರ ಕ್ಷಣಗಳ ಫೋಟೋಗಳನ್ನು ಶೇರ್‌ ಮಾಡಿಕೊಂಡಿರುವ ಗ್ರಾಂಡ್ ರಿವರ್‌ ಆಸ್ಪತ್ರೆ, “ಆರು ವರ್ಷಗಳಿಂದ ಜೋಡಿಯಾಗಿರುವ ಈ ಇಬ್ಬರೂ ಲಸಿಕೆ ಕ್ಲಿನಿಕ್‌ನಲ್ಲಿ ಈ ಚಳಿಗಾಲದಿಂದ ಕೆಲಸ ಮಾಡಲು ಶುರು ಮಾಡಿದ್ದಾರೆ. ಇಲ್ಲಿ ಬಹಳಷ್ಟು ಒಳ್ಳೆ ಸ್ನೇಹಿತರನ್ನು ಸಂಪಾದಿಸಿದ ರ‍್ಯಾನ್ ತನ್ನ ಮನದನ್ನೆಗೆ ಪ್ರಪೋಸ್ ಮಾಡಲು ಇದೇ ಸೂಕ್ತ ಸ್ಥಳವೆಂದು ನಿರ್ಧರಿಸಿದ್ದಾರೆ… ಅದು ಸರಿಯೂ ಆಗಿದೆ ! ಕ್ಲಿನಿಕ್‌ನಲ್ಲಿದ್ದ ಎಲ್ಲರಿಗೂ ಆನಂದ ಭಾಷ್ಪ ಹರಿದಿದೆ !” ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...