alex Certify BIG NEWS: ರೈಲು ಸಂಚರಿಸುವಾಗ ಹಳಿಗೆ ಸಿಲುಕಿ ಮೃತಪಟ್ಟರೆ ಸಿಗೋಲ್ಲ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈಲು ಸಂಚರಿಸುವಾಗ ಹಳಿಗೆ ಸಿಲುಕಿ ಮೃತಪಟ್ಟರೆ ಸಿಗೋಲ್ಲ ಪರಿಹಾರ

ರೈಲು ಸಂಚರಿಸುವ ವೇಳೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇಂತಹ ಘಟನೆ ತಪ್ಪಿಸಲು ರೈಲ್ವೆ ಪೊಲೀಸರು ಬಿಗಿಯಾದ ಕ್ರಮ ಕೈಗೊಳ್ಳಲು‌ ನಿರ್ಧರಿಸಿದ್ದಾರೆ.

ರೈಲು ಹಳಿ ದಾಟಲು ಹೋಗಿ ಅಪಘಾತ ಆಗುವ ಸ್ಥಳಗಳನ್ನು ಮ್ಯಾಪಿಂಗ್ ಮಾಡಲಾಗುತ್ತದೆ. ಹಾಗೆಯೇ ರೈಲಿಗೆ ಸಿಲುಕಿ ಮೃತರಾದ ಸಂದರ್ಭದಲ್ಲಿ ಎಫ್ಐಆರ್ ದಾಖಲಿಸುವ ಕೆಲಸ‌ ಮಾಡಲಾಗುತ್ತದೆ. ಇದರಿಂದ ಅವಘಡಗಳು ನಡೆದಾಗ ಮೃತರ ಕುಟುಂಬಗಳಿಗೆ ಪರಿಹಾರ ಕೂಡ ಸಿಗುವುದಿಲ್ಲ.‌

2021ರಲ್ಲಿ ಒಟ್ಟು 1,752 ರೈಲ್ವೆಗೆ ಸಂಬಂಧಿಸಿದ ಸಾವುಗಳು ಸಂಭವಿಸಿವೆ. ಅದರಲ್ಲಿ 1,114 ಲೈನ್ ಕ್ರಾಸಿಂಗ್‌ ನಿಂದಾಗಿ, 277 ರೈಲುಗಳಿಂದ ಬಿದ್ದ ಕಾರಣ ಮತ್ತು 258 ನೈಸರ್ಗಿಕ ಕಾರಣಗಳಿಂದಾಗಿ. 1,752 ಸಾವುಗಳಲ್ಲಿ 1,557 ಬಲಿಪಶುಗಳು ಪುರುಷರಾಗಿದ್ದಾರೆ.

BIG NEWS: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ಶಿಕ್ಷಣ ಸಚಿವರ ವರದಿ ಬಳಿಕ ಕ್ರಮ ಎಂದ ಸಿಎಂ ಬೊಮ್ಮಾಯಿ

ರೈಲು ಹಳಿಗಳಲ್ಲಿ ಪ್ರತಿ ವರ್ಷ ಹೆಚ್ಚಿನ ಸಾವುಗಳು ಹಳಿಗಳನ್ನು ದಾಟುವುದರಿಂದ ಸಂಭವಿಸುತ್ತವೆ, ಎಲ್ಲೆಂದರಲ್ಲಿ ರೈಲು ಹಳಿ ದಾಟುವುದು ಕಾನೂನುಬಾಹಿರ ಕೃತ್ಯವಾಗಿದೆ, ಹೀಗಾಗಿ ಕಠಿಣ ಕ್ರಮಕ್ಕೆ ಕೈ ಹಾಕಲಾಗಿದೆ ಎಂಬುದು ರೈಲ್ವೆ ಪೊಲೀಸರ ವಿವರಣೆ.

ಈ ತಿಂಗಳ ಆರಂಭದಲ್ಲಿ, ರೈಲ್ವೆ ಪೊಲೀಸರು ಹಳಿಗಳನ್ನು ದಾಟುವಾಗ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಐಪಿಸಿಯ ಸೆಕ್ಷನ್ 304 ಎಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲು ಪ್ರಾರಂಭಿಸಿದರು. ಇದರಿಂದ ಕುಟುಂಬಕ್ಕೆ ಪರಿಹಾರ ಸಿಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...