alex Certify ಅಪರೂಪದ ಬಿಳಿ ಕಾಂಗರೂ ಕಂಡು ಮೂಕವಿಸ್ಮಿತರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಿಳಿ ಕಾಂಗರೂ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಆಸ್ಟ್ರೇಲಿಯಾ ಖಂಡದ ದೇಶವು ಮರುಭೂಮಿಗಳು, ಪರ್ವತಗಳು, ಕಡಲತೀರಗಳು, ಹವಳದ ಬಂಡೆಗಳು ಮತ್ತು ಕಾಂಗರೂಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಹಸು ದೇವತೆಯಾದರೆ, ಆಸ್ಟ್ರೇಲಿಯಾದಾದ್ಯಂತ ಇರುವ ಮೂಲನಿವಾಸಿಗಳಿಗೆ ಕಾಂಗರೂಗಳು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.

ಅಪರೂಪದ ಬಿಳಿ ಕಾಂಗರೂಗಳ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರಗಳನ್ನು ಪನೋರಮಾ ಗಾರ್ಡನ್ ಎಸ್ಟೇಟ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ. ಬಿಳಿ ಕಾಂಗರೂಗಳು ಪತ್ತೆಯಾದ ಸ್ಥಳವನ್ನು ಆಸ್ಟ್ರೇಲಿಯಾದ ಮಾರ್ನಿಂಗ್ಟನ್ ಪೆನಿನ್ಸುಲಾದ ಪನೋರಮಾ ವನ್ಯಜೀವಿ ಅಭಯಾರಣ್ಯ ಎಂದು ಗುರುತಿಸಲಾಗಿದೆ.

ಬಿಳಿ ಕಾಂಗರೂ ಕಾಣ ಸಿಗುವುದು ಬಹಳ ಅಪರೂಪವಾಗಿರುವುದರಿಂದ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪ್ರಾಣಿ ಪ್ರಿಯರ ಗಮನವನ್ನು ಸೆಳೆದಿವೆ. ಈ ಚಿತ್ರಗಳು ಪ್ರಾಣಿಪ್ರಿಯರಲ್ಲಿ ಸಂತಸ ಮೂಡಿಸಿದೆ. ಪ್ರಾಣಿ ಪ್ರಿಯರು ಅಪರೂಪದ ಚಿತ್ರಗಳ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ.

ಆದರೆ ಕೆಲವು ಬಳಕೆದಾರರು ಪ್ರಾಣಿಗಳ ಸ್ಥಳವನ್ನು ಬಹಿರಂಗಪಡಿಸಿದ್ದರಿಂದ ಆತಂಕಗೊಂಡಿದ್ದಾರೆ. ಕಳ್ಳ ಬೇಟೆಗಾರರು ಕಾಂಗರೂಗಳನ್ನು ಕೊಲ್ಲಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...