alex Certify ವಯಸ್ಸಾದ ಮಹಿಳೆಯರ ಕಂಠದಿಂದ ಮೊಳಗಿತು ಮೇರಾ ದಿಲ್ ಯೇ ಪುಕಾರೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾದ ಮಹಿಳೆಯರ ಕಂಠದಿಂದ ಮೊಳಗಿತು ಮೇರಾ ದಿಲ್ ಯೇ ಪುಕಾರೆ: ವಿಡಿಯೋ ವೈರಲ್

ಲತಾ ಮಂಗೇಶ್ಕರ್​ ಅವರು ಹಾಡಿರುವ ಮೇರಾ ದಿಲ್ ಯೇ ಪುಕಾರೆ ಹಾಡು ಸದ್ಯದ ಟ್ರೆಂಡ್​. ಎಲ್ಲೆಲ್ಲೂ ಈ ಹಾಡಿನದ್ದೇ ಮಾತು. ಜಾಲತಾಣಗಳಲ್ಲಿ ಇದರದ್ದೇ ಹವಾ. ಇದಕ್ಕೆ ಕಾರಣ, ಪಾಕಿಸ್ತಾನಿ ಹುಡುಗಿ ಆಯೇಷಾ. ಈಕೆ ಈ ಹಾಡಿಗೆ ರೀಮಿಕ್ಸ್​ ಮಾಡಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನಂತರ ಪಾಕಿಸ್ತಾನದಲ್ಲಿಯೂ ಈ ಹಾಡಿನ ಹವಾ ಜೋರಾಗಿ ಶುರುವಾಗಿದೆ. ಎಲ್ಲರೂ ಇದೇ ಹಾಡನ್ನು ರೀಮಿಕ್ಸ್​ ಮಾಡಿ ಹಾಡುವುದೋ ಇಲ್ಲವೇ ನೃತ್ಯ ಮಾಡಿ ವಿಡಿಯೋ ಮಾಡಲೋ ಶುರುವಿಟ್ಟುಕೊಂಡಿದ್ದಾರೆ.

ಇದರ ಮತ್ತೊಂದು ಭಾಗವಾಗಿ ಇದೀಗ ವಯಸ್ಸಾದ ಮಹಿಳೆಯರ ಗುಂಪು ಮೂಲತಃ ಲತಾ ಮಂಗೇಶ್ಕರ್ ಹಾಡಿರುವ ಹಾಡಿನ ರೀಮಿಕ್ಸ್ ಆವೃತ್ತಿಯನ್ನು ಹಾಡುವುದನ್ನು ಕಾಣಬಹಾಗಿದೆ.

ಮೋರಿಯಾ ಆಕಾಶ್ ಅವರು ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ, ವಯಸ್ಸಾದ ಮಹಿಳೆಯರು ಚಳಿಯ ವಾತಾವರಣಕ್ಕೆ ಶಾಲು, ಉಣ್ಣೆಯ ಬಟ್ಟೆ ಧರಿಸಿ ಈ ಹಾಡನ್ನು ಹಾಡುವುದನ್ನು ನೋಡಬಹುದಾಗಿದೆ.

ಇದನ್ನು ಹರಿಯಾಣದಲ್ಲಿ ಎಲ್ಲೋ ಚಿತ್ರೀಕರಿಸಲಾಗಿದೆ ಎಂದು ಹಲವರು ಗಮನಸೆಳೆದಿದ್ದಾರೆ, ಆದರೆ ರೀಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳವು ಚಾಂದಿನಿ ಚೌಕ್ ಆಗಿದೆ.

ವಿಡಿಯೋ ಇದಾಗಲೇ 1.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...