alex Certify ಮದುವೆ ಮನೆಯಲ್ಲಿ ವರನ ತಂದೆ ನೃತ್ಯಕ್ಕೆ ಅತಿಥಿಗಳು ಬೆರಗು: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ವರನ ತಂದೆ ನೃತ್ಯಕ್ಕೆ ಅತಿಥಿಗಳು ಬೆರಗು: ವಿಡಿಯೋ ವೈರಲ್​

ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣ. ಆದ್ದರಿಂದ, ತನ್ನ ಮಗನ ಮದುವೆಯಲ್ಲಿ, ಅಪ್ಪನೊಬ್ಬ ಮಾಡಿರುವ ಡಾನ್ಸ್​ ಸಿಕ್ಕಾಪಟ್ಟೆ ವೈರಲ್​ ಅಗಿದೆ.

ಯೆ ಜವಾನಿ ಹೈ ದೀವಾನಿʼ ಯಲ್ಲಿ ರಣಬೀರ್ ಕಪೂರ್ ಅಭಿನಯದ ಬತ್ತಮೀಜ್ ದಿಲ್​ ಹಾಡಿಗೆ ವರನ ಅಪ್ಪ ಸಕತ್​ ಡಾನ್ಸ್​ ಮಾಡಿದ್ದಾರೆ. ಈ ವ್ಯಕ್ತಿ ರಣಬೀರ್ ಕಪೂರ್ ಅವರ ಬನ್ನಿಯನ್ನು ಅನುಕರಿಸುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.

ವಯಸ್ಸಾದ ವ್ಯಕ್ತಿ ಬತ್ತಮೀಜ್ ದಿಲ್ ನ ಹುಕ್ ಸ್ಟೆಪ್ ಅನ್ನು ನಕಲು ಮಾಡಿದ್ದು ಮಾತ್ರವಲ್ಲದೆ ಯೆ ಜವಾನಿ ಹೈ ದೀವಾನಿ ಚಿತ್ರದ ರಣಬೀರ್ ಕಪೂರ್ ಅವರ ತಮಾಷೆಯ ಸಂಭಾಷಣೆಯನ್ನು ಅನುಕರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದ್ದರಿಂದ ಮದುವೆ ಮನೆಯಲ್ಲಿ ವರನ ತಂದೆಯೇ ಹೈಲೈಟ್​ ಆಗಿದ್ದರು.

ಬೂದು ಬಣ್ಣದ ಸೂಟ್‌ ಧರಿಸಿ, ಡ್ಯಾನ್ಸ್ ಫ್ಲೋರ್‌ನಲ್ಲಿ ಕೆಲವು ಟ್ವಿಸ್ಟ್‌ಗಳನ್ನು ಮಾಡಲು ಪ್ರಾರಂಭಿಸುವ ಮೊದಲು ತಂದೆ ಮೊದಲು ಸಂಭಾಷಣೆಯನ್ನು ಲಿಪ್-ಸಿಂಕ್ ಮಾಡುತ್ತಾರೆ. ಇದರ ವಿಡಿಯೋ ನೋಡಿ ನೆಟ್ಟಿಗರು ವ್ಹಾರೆವ್ಹಾ ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...