alex Certify ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್

ಉತ್ತರಪ್ರದೇಶದ ಫಿಲಿಬಿಟ್ ನಲ್ಲಿ ವರನೊಬ್ಬ ವರದಕ್ಷಿಣೆ ಹಣ ಪಡೆದುಕೊಂಡು ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ವಧುವಿನ ಮನೆಯವರು ಕಂಗಾಲಾಗಿದ್ದಾರೆ.

ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ವರ ವಧುವನ್ನು ಬಿಟ್ಟು ಮದುವೆಯ ಹಿಂದಿನ ದಿನ ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ.

ಫಿಲಿಬಿಟ್ ಮಜಿಗಾಮ್ ಗ್ರಾಮದ ಯುವತಿಯ ಮದುವೆ ಶಹಜಾನ್ ಪುರದ ಚಂದುವಾಪುರದ ರಾಮ್ ಸ್ವರೂಪ್ ಜೊತೆಗೆ ನಿಶ್ಚಯವಾಗಿತ್ತು. ಮೇ 23 ರಂದು ವಧುವಿನ ಕಡೆಯವರು ವರನ ಗ್ರಾಮಕ್ಕೆ ಆಗಮಿಸಿದ್ದು, 51 ಸಾವಿರ ರೂಪಾಯಿ ನಗದು, ಬೈಕ್ ವರದಕ್ಷಿಣೆಯಾಗಿ ಕೊಟ್ಟಿದ್ದು, ತಿಲಕ್ ಸಮಾರಂಭ ಮುಗಿಸಿದ್ದಾರೆ. ಮದುವೆ ಶಾಸ್ತ್ರ ಮುಗಿಸಿದ ಹುಡುಗಿ ಮನೆಯವರು ವಾಪಸ್ ತೆರಳಿದ್ದಾರೆ. ಮೇ 24 ರಂದು ಮದುವೆ ಮುಹೂರ್ತ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ರಾಮ್ ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಹುಡುಗಿ ಮನೆಯವರು ವರನ ಮನೆಗೆ ಹೋಗಿ ಆತನ ಪೋಷಕರೊಂದಿಗೆ ಜಗಳವಾಡಿದ್ದು, ಪೋಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...