alex Certify ಹೆಣ್ಣು ಶಿಶುವನ್ನು ಬಿಟ್ಟು ಹೋದ ಅಮ್ಮ: ಮಗುವಿಗೆ ಹಾಲುಣಿಸಿದ SHO ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಶಿಶುವನ್ನು ಬಿಟ್ಟು ಹೋದ ಅಮ್ಮ: ಮಗುವಿಗೆ ಹಾಲುಣಿಸಿದ SHO ಪತ್ನಿ

ನೋಯ್ಡಾ: ಗ್ರೇಟರ್ ನೋಯ್ಡಾದ ಸ್ಟೇಷನ್ ಹೌಸ್ ಆಫೀಸರ್‌ನ ಪತ್ನಿ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಗಳೊಳಗೆ ಪತ್ತೆಯಾದ ಮಗುವಿಗೆ ಹಾಲುಣಿಸಿದ್ದಾರೆ.

ಶಾರದಾ ಆಸ್ಪತ್ರೆ ಬಳಿಯ ಪೊದೆಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಶಿಶುವನ್ನು ಯಾರೋ ಬಿಟ್ಟು ಹೋಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದರು.

ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಎಸ್‌.ಎಚ್‌.ಒ. ಅವರ ಪತ್ನಿ ಜ್ಯೋತಿ ಸಿಂಗ್ ಅವರು ಸ್ವಯಂಪ್ರೇರಿತರಾಗಿ ಸ್ತನ್ಯಪಾನ ಮಾಡಿಸಲು ಮುಂದಾದರು ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಹೆಣ್ಣು ಮಗುವಿನ ಸ್ಥಿತಿ ಸ್ಥಿರವಾಗಿದೆ. ಆಕೆಯನ್ನು ಬಿಟ್ಟು ಹೋದ ವ್ಯಕ್ತಿಯನ್ನು ಗುರುತಿಸಲು ಪೊಲೀಸ್ ತಂಡಗಳು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...