alex Certify ಹ್ಯಾಟ್ಸಾಫ್: 6 ಸರ್ಕಾರಿ ಉದ್ಯೋಗ ಬಂದ್ರೂ ತಿರಸ್ಕರಿಸಿ ಗುರಿ ತಲುಪಿದ ಸಾಧಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಟ್ಸಾಫ್: 6 ಸರ್ಕಾರಿ ಉದ್ಯೋಗ ಬಂದ್ರೂ ತಿರಸ್ಕರಿಸಿ ಗುರಿ ತಲುಪಿದ ಸಾಧಕ

ಬೆಳಗಾವಿ: ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಸರ್ಕಾರಿ ಕೆಲಸ ಬಿಟ್ಟು ಪಿಎಸ್ಐ ಆದ ಸಾಧಕನ ಮಾಹಿತಿ ಇಲ್ಲಿದೆ. 25 ವರ್ಷದ ಕಾಮಣ್ಣ ಹೆಳವರ ಕೂಲಿ ಕಾರ್ಮಿಕ ಬಸವರಾಜ ಮತ್ತು ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿರುವ ಮಹಾದೇವಿಯವರ ಪುತ್ರರಾಗಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಹಿಂದುಳಿದ ಹೆಳವ ಸಮುದಾಯದ ಯುವಕ ಕಾಮಣ್ಣ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಹಿಂದೆ ಆರು ಸರ್ಕಾರಿ ನೌಕರಿಗಳು ಬಂದಿದ್ದರೂ, ಛಲಬಿಡದೆ ಅಧ್ಯಯನ ನಡೆಸಿ ಅಧಿಕಾರಿಯಾಗುವ ಆಸೆ ಈಡೇರಿಸಿ ಗುರಿ ತಲುಪಿದ್ದಾರೆ.

ಅವರು ಸರ್ಕಾರಿ ಕೆಲಸ ತಿರಸ್ಕರಿಸಿದಾಗ ಕೆಲವರು ಗೇಲಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಓದಿ ಅಧಿಕಾರಿಯಾಗಬೇಕೆನ್ನು ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.

ಅಥಣಿ ತಾಲೂಕಿನ ಅನಂತಪುರ ಗ್ರಾಮದವರಾದ ಕಾಮಣ್ಣ ಅವರ ಪೋಷಕರು ಜೀವನ ನಿರ್ವಹಣೆಗಾಗಿ 30 ವರ್ಷಗಳಿಂದ ಹಣಬರಟ್ಟಿ ಗ್ರಾಮದಲ್ಲಿ ನೆಲೆಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ ಕಾಮಣ್ಣ ನಂತರ ಹಾವೇರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದಿದ್ದಾರೆ.

ಪ್ರಥಮ ದರ್ಜೆ ಸಹಾಯಕ, ಸಿವಿಲ್ ಪೊಲೀಸ್ ಹುದ್ದೆ, ರೈಲ್ವೆ ಇಲಾಖೆಯಲ್ಲಿ ಸಿ ದರ್ಜೆ ನೌಕರಿ ಸೇರಿದಂತೆ ಆರು ಸರ್ಕಾರಿ ನೌಕರಿಗಳಿಗೆ ಆಯ್ಕೆಯಾಗಿದ್ದರೂ ಅವರು ಅವುಗಳಿಗೆ ಸೇರದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗುವ ಕನಸು ಅವರದ್ದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...