alex Certify ಮಾರ್ಗಸೂಚಿ ಅನುಸರಿಸದೇ ಟಿ.ವಿ. ಚಾನೆಲ್​ಗಳಿಂದ ಕ್ರೈಂ ವರದಿ: ಕೇಂದ್ರದ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಗಸೂಚಿ ಅನುಸರಿಸದೇ ಟಿ.ವಿ. ಚಾನೆಲ್​ಗಳಿಂದ ಕ್ರೈಂ ವರದಿ: ಕೇಂದ್ರದ ಆಕ್ರೋಶ

ಅಪಘಾತ, ಸಾವುಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ
ಕ್ರೈಂ ವರದಿಯನ್ನು ಮಾಡುವಾಗ ಭಯಾನಕವಾಗಿ ತೋರಿಸುತ್ತಿರುವ ಖಾಸಗಿ ಟಿ.ವಿ ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೆಲವೊಂದು ಸೂಚನೆಗಳನ್ನು ನೀಡಿದೆ.

ಇಂಥ ಸುದ್ದಿಗಳನ್ನು ಪ್ರಸಾರ ಮಾಡುವಾಗ “ಒಳ್ಳೆಯ ಅಭಿರುಚಿ ಮತ್ತು ಸಭ್ಯತೆಯ” ಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಟೆಲಿವಿಷನ್ ಚಾನೆಲ್‌ಗಳ ವಿವೇಚನೆಯ ಕೊರತೆಯ ಹಲವಾರು ನಿದರ್ಶನಗಳು ಸಚಿವಾಲಯದ ಗಮನಕ್ಕೆ ಬಂದಿದೆ. ಆದ್ದರಿಂದ ಇನ್ನು ಮುಂದೆ ಇಂಥ ಸುದ್ದಿ ಪ್ರಸಾರ ಮಾಡುವಾಗ ಕೆಲವೊಂದು ಮಾರ್ಗಸೂಚಿ ಅನುಸರಿಸಬೇಕು ಎಂದಿದೆ.

ಟೆಲಿವಿಷನ್ ಚಾನೆಲ್‌ಗಳು ಮಹಿಳೆಯರು ಸೇರಿದಂತೆ ವ್ಯಕ್ತಿಗಳ ರಕ್ತಸಿಕ್ತವಾದ ಮೃತದೇಹಗಳು ಮತ್ತು ಗಾಯಾಳುಗಳ ಚಿತ್ರಗಳು/ವಿಡಿಯೋಗಳನ್ನು ತೋರಿಸಿವೆ. ಹಿರಿಯರನ್ನು, ಮಹಿಳೆಯರನ್ನು ದಯಾರಹಿತವಾಗಿ ಹಲ್ಲೆ ಮಾಡುವ, ಹೊಡೆಯುವ ನಿಕಟ ದೃಶ್ಯಗಳನ್ನು (ಕ್ಲೋಸ್ ಶಾಟ್ ) ತೋರಿಸಿವೆ. ಶಿಕ್ಷಕರು ಮಕ್ಕಳಿಗೆ ಹೊಡೆಯುವ ದೃಶ್ಯಗಳನ್ನು, ಸಂತ್ರಸ್ತರ ಆಕ್ರಂದನವನ್ನು ನಿರಂತರವಾಗಿ ಪದೇ ಪದೇ ತೋರಿಸಿ ಅದನ್ನು ಭೀಭತ್ಸವಾಗಿಸಿವೆ ಎಂದು ಸಚಿವಾಲಯ ತಿಳಿಸಿದೆ.

ಚಿತ್ರಗಳನ್ನು ಬ್ಲರ್​ ಮಾಡುವ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದೆ ಅಥವಾ ಅವುಗಳನ್ನು ಲಾಂಗ್ ಶಾಟ್ ಮೂಲಕ ತೋರಿಸುವ ವಿಧಾನವನ್ನು ಅನುಸರಿಸದೆ ಅದನ್ನು ಇನ್ನಷ್ಟು ಘೋರವಾಗಿಸಿ ಹಲವಾರು ನಿಮಿಷಗಳವರೆಗೆ ಪದೇ ಪದೇ ತೋರಿಸಲಾಗುತ್ತಿದೆ. ಅಂತಹ ಘಟನೆಗಳನ್ನು ವರದಿ ಮಾಡುವ ವಿಧಾನವು ಪ್ರೇಕ್ಷಕರಿಗೆ ಅಸಹ್ಯಕರ ಮತ್ತು ದುಃಖಕರವಾಗಿದೆ ಎಂದು ಅದು ಹೇಳಿದೆ. ಆದ್ದರಿಂದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...