alex Certify ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಸೆಲೆಬ್ರಿಟಿಗಳ ಪೈಕಿ 2ನೇ ಸ್ಥಾನದಲ್ಲಿ ಶಾರುಖ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಸೆಲೆಬ್ರಿಟಿಗಳ ಪೈಕಿ 2ನೇ ಸ್ಥಾನದಲ್ಲಿ ಶಾರುಖ್ ಪುತ್ರ

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈ ವರ್ಷ ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಸರ್ಚ್ ಮಾಡಲ್ಪಟ್ಟ ದೇಶದ ಸೆಲೆಬ್ರಿಟಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೂಗಲ್ ಇಂಡಿಯಾದ ’ಇಯರ್‌ ಇನ್ ಸರ್ಚ್’ ಫಲಿತಾಂಶದಲ್ಲಿ ಈ ಅಂಶ ಪತ್ತೆಯಾಗಿದೆ.

ಲಕ್ಸೂರಿ ಕ್ರೂಸ್ ಒಂದರಲ್ಲಿ ಡ್ರಗ್ಸ್‌ ವಶಕ್ಕೆ ಪಡೆದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಸಿಬ್ಬಂದಿಯಿಂದ ಬಂಧಿಸಲ್ಪಟ್ಟಿದ್ದ 23 ವರ್ಷದ ಆರ್ಯನ್‌, ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆಯುವ ಮುನ್ನ ಆರ್ಥರ್‌ ರೋಡ್ ಜೈಲಿನಲ್ಲಿ ಮೂರು ವಾರ ಕಳೆದಿದ್ದರು.

ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಇದಾದ ಬಳಿಕ ಪ್ರಕರಣದ ವಿಚಾರಣೆಯ ವೇಳೆ ಸಾಕ್ಷಿಯಾಗಿ ಬಂದು ಮಾತನಾಡಿದ್ದ ಪ್ರಭಾಕರ್‌ ಸಾಯ್ಲ್‌ ಎಂಬಾತ, ಆರ್ಯನ್‌ ಖಾನ್‌ನನ್ನು ಆತನ ತಂದೆಯಿಂದ ದುಡ್ಡು ಕೀಳುವ ಉದ್ದೇಶದಿಂದ ಬಂಧಿಸಲಾಗಿತ್ತು ಎಂದಿದ್ದರು. ಆರ್ಯನ್ ಖಾನ್‌ ಬಿಡುಗಡೆಗಾಗಿ 25 ಕೋಟಿ ರೂಪಾಯಿಗಳ ಬೇಡಿಕೆ ಇಡುತ್ತಿರುವ ದೂರವಾಣಿ ಕರೆಯೊಂದನ್ನು ತಾನು ಆಲಿಸಿದ್ದಾಗಿ ಪ್ರಭಾಕರ್‌ ಹೇಳಿದ್ದರು.

ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಟ್ಟು, ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ದೇಶದಲ್ಲಿ ಮೊದಲ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಎಂದಾದರೂ ಸವಿದಿದ್ದೀರಾ ‘ಕಡಲೆಹಿಟ್ಟಿನ ಆಮ್ಲೆಟ್’…..?

ಗೂಗಲ್ ಸರ್ಚ್‌ನಲ್ಲಿ ಶೋಧಿಸಲ್ಪಟ್ಟ ಇತರೆ ಸೆಲೆಬ್ರಿಟಿಗಳಲ್ಲಿ ಪಂಜಾಬಿ ಗಾಯಕ ಶೆಹನಾಜ಼್‌ ಗಿಲ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ನಟ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಸಹ ಇದ್ದಾರೆ. ಫಲಿತಾಂಶಗಳಲ್ಲಿ ಎಲಾನ್ ಮಸ್ಕ್‌ ಸಹ ಇದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...