alex Certify ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಇಳಿಕೆಯಾಗಿದೆ ಅಡುಗೆ ಎಣ್ಣೆ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಇಳಿಕೆಯಾಗಿದೆ ಅಡುಗೆ ಎಣ್ಣೆ ಬೆಲೆ

ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಗಳು ಕುಸಿಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಲವೆಡೆ ಅಡುಗೆ ಎಣ್ಣೆ ಬೆಲೆಗಳಲ್ಲಿ 20%ನಷ್ಟು ಇಳಿಕೆ ಕಂಡುಬಂದಿದೆ.

ಬಿಜೆಪಿ ಸೇರುವಾಗ ಹೆಚ್​. ವಿಶ್ವನಾಥ್​​​ಗೆ​ ಬಿಎಸ್​ವೈ ವಯಸ್ಸು ಗೊತ್ತಿರಲಿಲ್ಲವೇ..? ಹೆಚ್​.ಡಿ.ಕೆ. ವ್ಯಂಗ್ಯ

ಅಡುಗೆ ಎಣ್ಣೆ ಬೆಲೆಗಳ ಇಳಿಕೆಯ ವಿವರ ಇಂತಿದೆ

1. ಪಾಮ್‌ ಎಣ್ಣೆಯ ಬೆಲೆ ಮೇ 7ರಂದು ರೂ.142/ಕೆಜಿ ಇದ್ದಿದ್ದು ಇಂದಿಗೆ 115 ರೂ./ಕೆಜಿಗೆ ಇಳಿದಿದೆ.

2. ಸೂರ್ಯಕಾಂತಿ ಎಣ್ಣೆಯ ಬೆಲೆಯು ಮೇ 5ರಂದು 188ರೂ./ಕೆಜಿ ಇಂದ 157 ರೂ./ಕೆಜಿಗೆ ಇಳಿದಿದೆ.

3. ಸೋಯಾ ಎಣ್ಣೆಯ ಬೆಲೆ ಮೇ 20ರಂದು 162 ರೂ./ಕೆಜಿ ಇದ್ದಿದ್ದು 138 ರೂ./ಕೆಜಿಗೆ ಇಳಿದಿದೆ.

4. ಸಾಸಿವೆ ಎಣ್ಣೆಯ ಬೆಲೆಯು ಮೇ 16ರಂದು 175 ರೂ./ಕೆಜಿ ಇದ್ದಿದ್ದು ಇಂದಿಗೆ 157 ರೂ./ಕೆಜಿಗೆ ಇಳಿದಿದೆ.

5. ಕಡಲೇಕಾಯಿ ಎಣ್ಣೆಯ ಬೆಲೆ ಮೇ 14ರಂದು 190 ರೂ./ಕಿಲೋ ಇದ್ದಿದ್ದು ಇಂದಿಗೆ 174 ರೂ./ಕಿಲೋಗೆ ಇಳಿದಿದೆ.

6. ವನಸ್ಪತಿ ಬೆಲೆಯು ಮೇ 2ರಂದು 154 ರೂ./ಕೆಜಿ ಇದ್ದಿದ್ದು ಇಂದಿಗೆ 141 ರೂ./ಕೆಜಿಗೆ ಇಳಿದಿದೆ.

ದೇಶದಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಹಾಗೂ ಪೂರೈಕೆಯ ನಡುವೆ ಭಾರೀ ಅಂತರವಿದ್ದ ಕಾರಣ ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿದ್ದವು. ಈ ನಿಟ್ಟಿನಲ್ಲಿ ಮಧ್ಯಂತರ ಹಾಗೂ ದೀರ್ಘಾವಧಿಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿರುವ ಕಾರಣ ಬೆಲೆಗಳು ಸ್ವಲ್ಪ ತಗ್ಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...