alex Certify ರಾಜ್ಯ ಸರ್ಕಾರದಿಂದ `ನೆರೆ ಸಂತ್ರಸ್ತರಿಗೆ’ ಗುಡ್ ನ್ಯೂಸ್ : `ಮನೆ ಹಾನಿ ಪರಿಹಾರ’ಕ್ಕೆ ಅನುದಾನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ `ನೆರೆ ಸಂತ್ರಸ್ತರಿಗೆ’ ಗುಡ್ ನ್ಯೂಸ್ : `ಮನೆ ಹಾನಿ ಪರಿಹಾರ’ಕ್ಕೆ ಅನುದಾನ ಬಿಡುಗಡೆ

ಬೆಂಗಳೂರು : ರಾಜ್ಯ ಸರ್ಕಾರವು ನೆರೆ ಸಂತ್ರಸ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2019-20 ರಿಂದ 2023 ರವರೆಗಿನ ನೆರೆ ಸಂತ್ರಸ್ತರ ಮನೆ ಹಾನಿ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

2019-20 ರಿಂದ 2022-23ನೇ ಸಾಲಿನವರೆಗೆ ಪವಾಹದಿಂದ ಉಂಟಾದ ಮನೆ ಹಾನಿ ಪರಿಹಾರ ಪಾವತಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ರೂ.500.00ಕೋಟಿಗಳನ್ನು ಬಿಡುಗಡೆಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಇವರ ಮೂಲಕ ನೆರೆ ಸಂತ್ರಸ್ತರ ಮನೆ ಹಾನಿ ಪರಿಹಾರವನ್ನು ಪಾವತಿಸಲು ಸರ್ಕಾರವು ನಿರ್ಧರಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ 2019-20 ರಿಂದ 2022-23ನೇ ಸಾಲಿನವರೆಗೆ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಹಾನಿಗೊಳಗಾದ ಮನಗಳಿಗೆ SDRF ಮಾರ್ಗಸೂಚಿ ದರ ಹೊರತುಪಡಿಸಿ ರಾಜ್ಯ ಸರ್ಕಾರದ ಹೆಚ್ಚುವರಿ ಪಾಲಿನ ಅನುದಾನವಾಗಿ ರೂ.500.00 ಕೋಟಿ (Rupees five hundred crores only) ಗಳನ್ನು ರಾಜ್ಯ ವಿವತ್ತು ಪರಿಹಾರ ನಿಧಿ ರಡಿ ವ್ಯವಸ್ತ್ರಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ಇವರಿಗೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ.

ಅನುದಾನವನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡಲಾಗಿದೆ:-

  1. ಈ ಆದೇಶದಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ನಿಯಮಾನುಸಾರ Category-A, B1 ಮತ್ತು B2 ನೆರೆ ಸಂತ್ರಸ್ತರ ಮನ ಹಾನಿ ಪರಿಹಾರಕ್ಕೆ ಅರ್ಹತೆಯಂತೆ ಮುಂದಿನ ಕಂತಿನ ಅನದಾನದ ಬಿಡುಗಡೆಗೆ ಮಾತ್ರ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ವೆಚ್ಚ ಭರಿಸುವುದು.
  2. ಬಿಡುಗಡೆಯಾದ ಅನುದಾನವನ್ನು ನಿಯಮಾನುಸಾರ ಅರ್ಹತೆಯಂತೆ Category-A, B1 ಮತ್ತು B2 ನರ ಸಂತ್ರಸ್ತರ ಮನೆ ನಿರ್ಮಾಣದ GPS ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ವ್ಯವಸ್ಮಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ, ಇವರ ಮೂಲಕ ನರ ಸಂತ್ರಸ್ತರ ಆಧಾರ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ Direct Benefit Transfer (DBT) ಮೂಲಕ ನೇರವಾಗಿ ಹಣ ಜಮೆ ಮಾಡುವುದು.

3, ಜಿಲ್ಲಾವಾರು, ತಾಲ್ಲೂಕುವಾರು ಮತ್ತು ಗ್ರಾಮ ಪಂಚಾಯಿತಿವಾರು ನರ ಸಂತ್ರಸ್ತರ ಮನ ಹಾನಿ ಪ್ರಕರಣದ ಫಲಾನುಭವಿಗಳ ಪಟ್ಟಿಯ ವಸ್ತುಸ್ಥಿತಿ ಮಾಹಿತಿಯನ್ನು ಕಡ್ಡಾಯವಾಗಿ ವ್ಯವಸ್ಥಾವಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ಇವರು ನಿಗಮದ ಜಾಲತಾಣದಲ್ಲಿ ಈ ಆದೇಶ ತಲುಪಿದ ಒಂದು ವಾರದಲ್ಲಿ ಪ್ರಚುರಪಡಿಸತಕ್ಕದ್ದು.

  1. ಅನುದಾನ ವೆಚ್ಚ ಮಾಡಿದ್ದಕ್ಕೆ ನಿಯಮಗಳಂತೆ ವ್ಯವಸ್ನಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಎಲ್ಲಾ ಲೆಕ್ಕ ಪತ್ರಗಳನ್ನು ಇಡತಕ್ಕದ್ದು ಮತ್ತು ಮುಂದಿನ ಅನುದಾನ ಬಿಡುಗಡ ಕೋರಿಕೆ ಸಲ್ಲಿಸುವಾಗ ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ಸಲ್ಲಿಸತಕ್ಕದ್ದು.
  2. ಅರ್ಹ ನರ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಅರ್ಹತೆಯಂತ ಪರಿಹಾರ ಮೊತ್ತ ಪಾವತಿಯಾಗಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ಖಚಿತಪಡಿಸಿಕೊಳ್ಳುವುದು, ಹಾಗೆಯೇ ಪ್ರತಿ ತಿಂಗಳು ಜಿಲ್ಲಾವಾರು ಅರ್ಹ ಸಂತ್ರಸ್ತರಿಗೆ ಬಿಡುಗಡೆ ಆಗಿರುವ ಅನುದಾನದ ವಿವರಗಳನ್ನು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಇವರು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಮಾಹಿತಿಗಾಗಿ ಜಿಲ್ಲಾವಾರು ವರದಿಯನ್ನು ಕಳುಹಿಸುವುದು.

  1. ನರ ಸಂತ್ರಸ್ತರ ಪುನರ್ವಸತಿ ಯೋಜನೆಯಲ್ಲಿ ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಇವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

  1. ಸದರಿ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆಯಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸತಕ್ಕದ್ದು.

ಮೇಲಿನಂತೆ ಬಿಡುಗಡೆ ಮಾಡಿರುವ ಅನುದಾನವನನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಹಾಗೂ ಸೇವೆಗಳು-3) ಇವರು ರಾಜ್ಯ ವಿಪತ್ತು ಪರಿಹಾರ ನಿಧಿ ಲೆಕ್ಕ ಶೀರ್ಷಿಕೆ:2245-80-102-0-01-140 (ಸಣ್ಣ ಕಾಮಗಾರಿಗಳು)ರಡಿ ಭರಿಸತಕ್ಕದ್ದು ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಹಾಗೂ ಸೇವೆಗಳು-3) ಇವರ ಮೇಲು ಸಹಿಯೊಂದಿಗೆ ಖಜಾನೆಗೆ ಬಿಲ್ಲು ಸಲ್ಲಿಸುವುದು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...