alex Certify ಗೋ ಪೂಜೆ ವೇಳೆ ಚಿನ್ನದ ಸರ ನುಂಗಿದ ಹಸು: ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋ ಪೂಜೆ ವೇಳೆ ಚಿನ್ನದ ಸರ ನುಂಗಿದ ಹಸು: ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ವೈದ್ಯರು

ಶಿವಮೊಗ್ಗ: ಗೋಪೂಜೆ ವೇಳೆ ಕೊರಳಿಗೆ ಹಾಕಿದ್ದ ಚಿನ್ನದ ಸರವನ್ನು ಹಸು ನುಂಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ ಸರವನ್ನು ಹೊರ ತೆಗೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ಸತ್ಯಾವತಿ ಉಡುಪ ಎಂಬುವರು ಮನೆಯಲ್ಲಿ ಗೋಪೂಜೆ ವೇಳೆ ಹಸುವಿಗೆ 12 ಗ್ರಾಂ ತೂಕದ 70,000 ರೂ. ಮೌಲ್ಯದ ಚಿನ್ನದ ಸರ ಹಾಕಿದ್ದಾರೆ. ಹಸು ಹೂವಿನ ಹಾರದ ಜೊತೆಗೆ ಚಿನ್ನದ ಸರವನ್ನು ಕೂಡ ನುಂಗಿದೆ.

ಕೋಣಂದೂರು ಪಶು ವೈದ್ಯ ಡಾ. ಆನಂದ್ ಅವರ ತಂಡ ಭಾನುವಾರ ಯಶಸ್ವಿಯಾಗಿ ಹಸುವಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿ ಹಸುವಿನ ಹೊಟ್ಟೆಯಲ್ಲಿದ್ದ ಚಿನ್ನದ ಸರ ಹೊರ ತೆಗೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...