alex Certify ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ

ಮನೆಯ ಛಾವಣಿಯಿಂದ ತನ್ನ ತಲೆಗೂದಲನ್ನು ನೇತುಹಾಕಿಕೊಂಡ ಬಾಲಕಿಯೊಬ್ಬಳು ’ಹಾರರ್‌’ ಚಿತ್ರ ದೃಶ್ಯ ನೆನಪಿಸುವ ಮೂಲಕ ತನ್ನ ಹೆತ್ತವರಿಗೆ ಕೆಲ ಕ್ಷಣ ಭಯ ಮೂಡಿಸಿದ್ದಾಳೆ.

ಚೀನಾದ ಗಿಜ಼ೌ ಪ್ರಾಂತ್ಯದಲ್ಲಿ ಜರುಗಿದ ಈ ಘಟನೆಯಲ್ಲಿ ವಿಶೇಷ ಫ್ಯಾನ್ ಒಂದನ್ನು ಹಾಕಲೆಂದು ಕೊರೆಯಲಾಗಿದ್ದ ರಂಧ್ರದೊಳಗೆ ತಲೆ ಸಿಕ್ಕಿಸಿಕೊಂಡ ಬಾಲಕಿಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಆಕೆಯ ತಲೆಗೆ ಎಣ್ಣೆ ಸವರಿ, ತಲೆಯನ್ನು ರಂಧ್ರದಿಂದ ಹೊರಗೆಳೆದಿದ್ದಾರೆ.

ರಂಧ್ರದೊಳಗೆ ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ನೋಡುಗರ ಎದೆ ಝಲ್ಲೆನ್ನಿಸುತ್ತೆ ವೈರಲ್‌ ವಿಡಿಯೋ: ಒಟ್ಟಾಗಿ ಊಟಕ್ಕೆ ಕುಳಿತಾಗಲೇ ಬಿತ್ತು ಸೀಲಿಂಗ್ ಫ್ಯಾನ್ – ಸ್ವಲ್ಪದರಲ್ಲೇ ಪಾರಾದ ಬಾಲಕ…..!

ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...