alex Certify ಈ ಯುವತಿಗಿದ್ದಾರೆ 50 ಮಂದಿ ಒಡಹುಟ್ಟಿದವರು…! ಅವರನ್ನು ಪತ್ತೆ ಹಚ್ಚಿದ್ದೇ ರೋಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯುವತಿಗಿದ್ದಾರೆ 50 ಮಂದಿ ಒಡಹುಟ್ಟಿದವರು…! ಅವರನ್ನು ಪತ್ತೆ ಹಚ್ಚಿದ್ದೇ ರೋಚಕ

ಡಿಎನ್​ಎ ಪರೀಕ್ಷೆಗೆ ಒಳಗಾಗಿದ್ದ ಯುವತಿಗೆ ತನಗೆ 50 ಮಂದಿ ಸಹೋದರ ಹಾಗೂ ಸಹೋದರಿಯರು ಇದ್ದಾರೆ ಎಂಬ ಶಾಕಿಂಗ್​ ಮಾಹಿತಿ ತಿಳಿದುಬಂದಿದೆ. ಅಂದಹಾಗೆ ಈ ವಿಚಾರ ಯುವತಿಗೆ ಮೊದಲು ತಿಳಿದಿರಲಿಲ್ಲ. ಹೀಗಾಗಿ ತನ್ನ ಭವಿಷ್ಯ ಏನಾಗಬಹುದೆಂದು ಯುವತಿ ಚಿಂತೆ ಮಾಡುವಂತಾಗಿದೆ.

ಟಿಕ್​ಟಾಕ್​ ಬಳಕೆದಾರಳಾದ ಯುವತಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ತನ್ನ ಪೋಷಕರು ಯಾರೆಂದು ತಿಳಿದುಕೊಳ್ಳುವ ಸಲುವಾಗಿ ಯುವತಿ 2018ರಲ್ಲಿ ಡಿಎನ್​ಎ ಪರೀಕ್ಷೆಗೆ ಒಳಗಾಗಿದ್ದಳು. ಈ ವೇಳೆ ಪರೀಕ್ಷಾ ವರದಿಯನ್ನು ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ.

ಮಾತ್ರವಲ್ಲದೇ ಮಹಿಳೆಯೊಬ್ಬರು ತನ್ನ ಮಗಳ ಡಿಎನ್ಎ ಕೂಡ ನಿಮಗೆ ಮ್ಯಾಚ್​ ಆಗ್ತಿದೆ ಎಂದು ಸಂದೇಶ ಕಳುಹಿಸಿದ ಬಳಿಕ ಈಕೆಗೆ ಆಘಾತವೇ ಉಂಟಾಗಿದೆ.

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಸಚಿವರಿಂದ ಸಿಹಿ ಸುದ್ದಿ

ಅಂದಹಾಗೆ ಈ ಯುವತಿಯು ವೀರ್ಯ ದಾನಿಯೊಬ್ಬರಿಗೆ ಜನಿಸಿದ ಮಗುವಾಗಿದ್ದಳು. ವೀರ್ಯ ದಾನಿಯ ಸಹಾಯದಿಂದ ಈಕೆಯ ತಾಯಿ ಜನ್ಮ ನೀಡಿದ್ದರು. ಆದರೆ ತಾಯಿಗೆ ಮುಂದಿನ ದಿನಗಳಲ್ಲಿ ತನ್ನ ಮಗಳು ವೀರ್ಯ ದಾನಿಯ ಹುಡುಕಾಟ ನಡೆಸಬಹುದು ಎಂಬ ಕಿಂಚಿತ್​ ಐಡಿಯಾ ಕೂಡ ಇದ್ದಿರಲಿಕ್ಕಿಲ್ಲ.

ಮಗಳಿಗೂ ಸಹ ತನ್ನ ಜನ್ಮ ಈ ರೀತಿ ಆಗಿರಬಹುದು ಎಂದೂ ತಿಳಿದಿರಲಿಲ್ಲ. ಈ ಡಿಎನ್​ಎ ಪರೀಕ್ಷೆ ಬಳಿಕ ಯುವತಿ ಫೇಸ್​ಬುಕ್​ನಲ್ಲಿ ಒಡಹುಟ್ಟಿದವರು ಎಂಬ ಫೇಸ್​ಬುಕ್​ ಗ್ರೂಪ್​ ಕ್ರಿಯೇಟ್​ ಮಾಡಿದಳು. ಈ ಫೇಸ್​ಬುಕ್​ ಪೇಜ್​ ಮೂಲಕ ತನ್ನ 50 ಮಂದಿ ಸಹೋದರ, ಸಹೋದರಿಯರನ್ನು ಯುವತಿ ಪತ್ತೆ ಮಾಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...