alex Certify ಹುಡುಗಿಗೆ ಕೊರೊನಾ ಲಸಿಕೆ ಹಾಕುವಷ್ಟರಲ್ಲಿ ಆರೋಗ್ಯ ಸಿಬ್ಬಂದಿಗೆ ಸುಸ್ತೋಸುಸ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಗೆ ಕೊರೊನಾ ಲಸಿಕೆ ಹಾಕುವಷ್ಟರಲ್ಲಿ ಆರೋಗ್ಯ ಸಿಬ್ಬಂದಿಗೆ ಸುಸ್ತೋಸುಸ್ತು…!

ಕೊರೊನಾ ಲಸಿಕೆ ಅಂದ್ರೆ ಅನೇಕರು ಹೆದರುತ್ತಾರೆ. ಲಸಿಕಾ ಕೇಂದ್ರಕ್ಕೆ ಬಂದ ಅನೇಕರು ಭಯಪಟ್ಟುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈಗ ಮಧ್ಯಪ್ರದೇಶದ ಧಾರ್ ಜಿಲ್ಲೆಯಿಂದ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಲಸಿಕಾ ಕೇಂದ್ರಕ್ಕೆ ಬಂದ ಹುಡುಗಿ, ಸೂಜಿ ನೋಡ್ತಿದ್ದಂತೆ ಭಯಗೊಂಡಿದ್ದಾಳೆ.

ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್…!

ಹುಡುಗಿ ರೀನಾ, ಕೊರೊನಾ ಲಸಿಕೆ ತೆಗೆದುಕೊಳ್ಳಲು ಸಿದ್ಧವಾಗಿರಲಿಲ್ಲ. ಆಕೆಗೆ ಲಸಿಕೆ ಹಾಕಲು,ಕುಟುಂಬಸ್ಥರು, ನರ್ಸ್ ಸುಸ್ತಾಗಿದ್ದಾರೆ. ಮೊದಲು ಲಸಿಕಾ ಕೇಂದ್ರಕ್ಕೆ ಬರುವ ಹುಡುಗಿ, ಕುರ್ಚಿ ಮೇಲೆ ಕುಳಿತುಕೊಳ್ತಾಳೆ. ಆದ್ರೆ ಸೂಜಿ ನೋಡ್ತಿದ್ದಂತೆ ಭಯಗೊಂಡು ಏಳ್ತಾಳೆ. ಲಸಿಕಾ ಕೇಂದ್ರಿಂದ ಹೊರಗೆ ಓಡುವ ಆಕೆಯನ್ನು ಎಳೆದು ತಂದ ಕುಟುಂಬಸ್ಥರು ಲಸಿಕೆ ಹಾಕಿಸ್ತಾರೆ. ಲಸಿಕೆ ಹಾಕುವ ವೇಳೆ ಹುಡುಗಿ ಬಿಕ್ಕಿ ಬಿಕ್ಕಿ ಅಳ್ತಿದ್ದಾಳೆ.

ಇಂಥ ವಿಡಿಯೋ ವೈರಲ್ ಆಗಿರುವುದು ಇದೇ ಮೊದಲಲ್ಲ. ಕೊರೊನಾ ಲಸಿಕೆ ಬಂದ್ಮೇಲೆ ಇಂಥ ಅನೇಕ ವಿಡಿಯೋಗಳು ವೈರಲ್ ಆಗಿವೆ. ಕೊರೊನಾ ಲಸಿಕೆ ತೆಗೆದುಕೊಳ್ಳಲು ಭಯಪಡುವ ಜನರು, ಅತ್ತು ಕರೆದು ಸಾಕಷ್ಟು ಡ್ರಾಮಾ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...