alex Certify ಕೋವಿಡ್-19 ಚಿಕಿತ್ಸೆಗೆ ಐದು ಲಕ್ಷದವರೆಗೆ ಸಾಲದ ಆಫರ್‌ ಮುಂದಿಟ್ಟ ಕೋಟಕ್ ಮಹಿಂದ್ರಾ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಚಿಕಿತ್ಸೆಗೆ ಐದು ಲಕ್ಷದವರೆಗೆ ಸಾಲದ ಆಫರ್‌ ಮುಂದಿಟ್ಟ ಕೋಟಕ್ ಮಹಿಂದ್ರಾ ಬ್ಯಾಂಕ್

ಕೋವಿಡ್-19 ಸೊಂಕಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ನೆರವು ನೀಡಲು ಮುಂದಾಗಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ನಿಯಮಿತ (ಕೆಎಂಬಿಎಲ್‌) ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ತುರ್ತು ವೈಯಕ್ತಿಕ ಸಾಲ ನೀಡಲು ಮುಂದಾಗಿದೆ.

ಈ ಆಫರ್‌ನಲ್ಲಿ10% ವಾರ್ಷಿಕ ಬಡ್ಡಿ ದರದಲ್ಲಿ ಸಾಲ ನೀಡಲು ಕೋಟಕ್ ಬ್ಯಾಂಕ್ ಮುಂದಾಗಿದೆ. ಕೋವಿಡ್-19 ಸೋಂಕಿಗೆ ವೈಯಕ್ತಿಕ ಹಾಗೂ ಕುಟುಂಬಸ್ಥರ ಚಿಕಿತ್ಸೆಯ ವೆಚ್ಚವನ್ನು ಈ ಸಾಲ ಭರಿಸಲಿದೆ.

ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸಾಲ ಮರುಪಾವತಿಗೆ ಒಂದರಿಂದ ನಾಲ್ಕು ವರ್ಷಗಳ ಅವಧಿ ಇದೆ. ಸಾಲದ ಮೊತ್ತದ 1%ರಷ್ಟನ್ನು ಪರಿಷ್ಕರಣಾ ಶುಲ್ಕವನ್ನಾಗಿ ಬ್ಯಾಂಕ್ ವಿಧಿಸಲಿದೆ.

ಇದೇ ವೇಳೆ, ಟಾಟಾ ಹಾಗೂ ಮೆಡಿಬಡ್ಡಿ ಜೊತೆಗೆ ಕೈಜೋಡಿಸಿರುವ ಕೋಟಕ್ ಮಹಿಂದ್ರಾ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ದಾರರಿಗೆ ಇನ್ನಷ್ಟು ಆಕರ್ಷಕ ಆರೋಗ್ಯ ಸೇವೆಗಳ ಆಫರ್‌ಗಳನ್ನು ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...