alex Certify ಚಿಟಿಕೆ ಹೊಡೆಯೋದ್ರಲ್ಲಿ ಹೀಗೆ ಮಾಡಿ ಗ್ಯಾಸ್ ಒಲೆ ಕ್ಲೀನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಟಿಕೆ ಹೊಡೆಯೋದ್ರಲ್ಲಿ ಹೀಗೆ ಮಾಡಿ ಗ್ಯಾಸ್ ಒಲೆ ಕ್ಲೀನ್

ದೀಪಾವಳಿ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. ಒಲೆಯ ಮೇಲೆ ಬೀಳುವ ಹಾಲು, ಟೀ, ಎಣ್ಣೆ ಮುಂತಾದವುಗಳನ್ನು ಸ್ವಚ್ಛಗೊಳಿಸುವುದು ಸುಲಭವಲ್ಲ. ಆದ್ರೆ ಆರೋಗ್ಯ ದೃಷ್ಟಿಯಿಂದ ಗ್ಯಾಸ್ ಒಲೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಗ್ಯಾಸ್ ಒಲೆ ಸ್ವಚ್ಛಗೊಳಿಸುವ ವೇಳೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಸುಲಭವಾಗಿ ಒಲೆ ಕ್ಲೀನ್ ಮಾಡುವ ವಿಧಾನ ಇಲ್ಲಿದೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಒಲೆಯನ್ನು ಸ್ವಚ್ಛಗೊಳಿಸಲು ವಿನೆಗರ್ ಬಹಳ ಉಪಯುಕ್ತ. ಒಂದು ಸ್ಪ್ರೇ ಬಾಟಲಿಯಲ್ಲಿ ವಿನೆಗರ್ ಮತ್ತು ನೀರನ್ನು 1:2 ಪ್ರಮಾಣದಲ್ಲಿ ಸೇರಿಸಿ, ಒಲೆಯ ಮೇಲೆ ಚಿಮುಕಿಸಿ ನಂತರ ಬಟ್ಟೆಯಿಂದ ಒರೆಸಿದರೆ ನಿಮ್ಮ ಸ್ಟೋವ್ ಹೊಳೆಯುತ್ತದೆ.

ಪಾತ್ರೆ ತೊಳೆಯುವ ಸೋಪು ಮತ್ತು ಬೇಕಿಂಗ್ ಸೋಡಾವನ್ನು ಸಮಪ್ರಮಾಣದಲ್ಲಿ ಬೆರೆಸಿ ಒಲೆಗೆ ಹಚ್ಚಿ. 5 ನಿಮಿಷ ಹಾಗೇ ಬಿಡಿ. ನಂತರ ಒಲೆಯನ್ನು ಸ್ಪಂಜ್ ಅಥವಾ ಬಟ್ಟೆಯಿಂದ ಒರೆಸಿ, ಒಲೆ ಹೊಳೆಯುತ್ತದೆ.

ಒಲೆಯನ್ನು ಸ್ವಚ್ಛಗೊಳಿಸಲು ಉಪ್ಪು, ಬೇಕಿಂಗ್ ಸೋಡಾ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಿ. ಇದರ ಸಹಾಯದಿಂದ ಒಲೆಯನ್ನು ಒರೆಸಿದರೆ ಅದರ ಮೇಲಿರುವ ಕಲೆಗಳೆಲ್ಲ ಮಾಯವಾಗುತ್ತದೆ.

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಗ್ಯಾಸ್ ಸ್ಟೋವ್ ನ ಬರ್ನರನ್ನು ಅಮೋನಿಯಾ ಸಹಾಯದಿಂದ ಸ್ವಚ್ಛಗೊಳಿಸಬಹುದು. ಬರ್ನರನ್ನು ಒಲೆಯಿಂದ ತೆಗೆದು ಅದನ್ನು ಒಂದು ಜಿಪ್ ಇರುವ ಬ್ಯಾಗ್ ನಲ್ಲಿ ಹಾಕಿ. ನಂತರ ಆ ಬ್ಯಾಗಿಗೆ ಅಮೋನಿಯಾ ಹಾಕಿ ಒಂದು ರಾತ್ರಿಯಿಡೀ ಬರ್ನರ್ ಅದರಲ್ಲೇ ಇಟ್ಟು ನಂತರ ತೆಗೆಯಿರಿ. ಹೀಗೆ ಮಾಡಿದರೆ ನಿಮ್ಮ ಬರ್ನರ್ ಪೂರ್ತಿಯಾಗಿ ಸ್ವಚ್ಛವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...