alex Certify ಸರಣಿ ಸರಗಳ್ಳಿಯರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಣಿ ಸರಗಳ್ಳಿಯರ ಅರೆಸ್ಟ್

ಸರಣಿ ಕಳ್ಳತನದ ಮೇಲೆ ವಾಂಟೆಡ್ ಆಗಿದ್ದ ಮೂವರು ಕಳ್ಳಿಯರ ಗುಂಪೊಂದನ್ನು ಬಂಧಿಸಲು ಚೆನ್ನೈ ಪೊಲೀಸರು ಸಫಲರಾಗಿದ್ದಾರೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆಪಾದಿತರನ್ನು ಸೋಮವಾರ ಬಂಧಿಸಲಾಗಿದೆ.

“ಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾ ಹಿರಿಯ ಮಹಿಳೆಯರನ್ನು ಗುರಿಯಾಗಿಸಿ, ಅವರ ಗಮನವನ್ನು ಬೇರೆಡೆ ಸೆಳೆದು ಚೈನ್‌ಗಳನ್ನು ಕೀಳುತ್ತಿದ್ದರು,” ಎಂದು ಪೊಲೀಸರು ತಿಳಿಸಿದ್ದಾರೆ.

BIG NEWS: RBI ಹೊಸ ನಿಯಮ – ಎಟಿಎಂನಲ್ಲಿ ನಗದಿಲ್ಲವೆಂದ್ರೆ ತುಂಬ ಬೇಕು ದಂಡ

ಶಂಕಿತರ ಮೇಲೆ ಕಣ್ಣಿಡಲು 21 ಮಹಿಳಾ ಪೇದೆಗಳ ತಂಡ ರಚಿಸಲಾಗಿತ್ತು. ಬಿ. ಶಾಂತಿ (35), ಎಸ್‌, ಚಿನ್ನತಾಯ್ (30) ಹಾಗೂ ಎಸ್‌. ಗೌರಿ (41) ಎಂಬ ಈ ಮೂವರು ನಗರದ ಕೋವಿಳ್‌ಪಟ್ಟಿ ಪ್ರದೇಶದವರಾಗಿದ್ದಾರೆ.

ಇವರು ಕಳ್ಳತನ ಮಾಡಿದ ಜಾಗಗಳ ಬಗ್ಗೆ ತಿಳಿದುಕೊಂಡ ಪೊಲೀಸರು, ಅಲ್ಲಿನ ಸಿಸಿ‌ ಟಿವಿ ಫುಟೇಜ್‌ಗಳ ಪರಿಶೀಲನೆ ಮಾಡಿ ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಮೂವರನ್ನೂ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...