alex Certify BIG BREAKING NEWS: ಗಡ್ ಚಿರೋಲಿ ಎನ್ ಕೌಂಟರ್ ನಲ್ಲಿ 26 ನಕ್ಸಲರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಗಡ್ ಚಿರೋಲಿ ಎನ್ ಕೌಂಟರ್ ನಲ್ಲಿ 26 ನಕ್ಸಲರ ಹತ್ಯೆ

ಮುಂಬೈ: ಭಾರತೀಯ ಸೇನೆಯಿಂದ 26 ಮಾವೋವಾದಿ ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದ್ದು, 26 ಮಾವೋವಾದಿ ನಕ್ಸಲರು ಹತ್ಯೆಗೀಡಾಗಿದ್ದಾರೆ.

ಗಡ್ಚಿರೋಲಿ ಎನ್‌ಕೌಂಟರ್ ನಲ್ಲಿ 26 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ನಾಗ್ಪುರಕ್ಕೆ ಹೆಲಿಕಾಪ್ಟರ್ ಮೂಲಕ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧನೋರಾ ತಹಸಿಲ್‌ನ ಗ್ಯಾರಬಟ್ಟಿ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ. ಗುಪ್ತಚರ ಮಾಹಿತಿ ಅನುಸರಿಸಿ ಪೊಲೀಸರ ಕಮಾಂಡೋ ತಂಡವು ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿತ್ತು. ಛತ್ತೀಸ್‌ಗಢದ ಗಡಿಯಲ್ಲಿರುವ ಜಿಲ್ಲೆ ಮುಂಬೈನಿಂದ 900 ಕಿ.ಮೀ ದೂರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...