alex Certify ಗಣ್ಯ ವ್ಯಕ್ತಿಗಳ ಏರಿಯಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮನೆಯಲ್ಲೇ ಸೆಕ್ಸ್ ದಂಧೆ, ದಾಳಿ ವೇಳೆ ಸಿಕ್ಕಿದ್ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣ್ಯ ವ್ಯಕ್ತಿಗಳ ಏರಿಯಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮನೆಯಲ್ಲೇ ಸೆಕ್ಸ್ ದಂಧೆ, ದಾಳಿ ವೇಳೆ ಸಿಕ್ಕಿದ್ಯಾರು ಗೊತ್ತಾ…?

ಇಂದೋರ್: ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಬಂಗಲೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಇಂದೋರ್ ವಿಜಯನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ವಿಜಯನಗರ್ ಪೊಲೀಸರು ಗ್ರಾಹಕರ ವೇಷದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮಹಿಳೆ ಸೇರಿದಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗ್ರಾಹಕರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ವಕೀಲರಾಗಿದ್ದು, ದಂಧೆ ನಡೆಸುವವರಿಗೆ ಪರಿಚಿತನಾಗಿರುವ ವಕೀಲ ಆಗಾಗ ಈ ಸ್ಥಳಕ್ಕೆ ಬಂದು ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಈ ಪ್ರದೇಶದಲ್ಲಿ ಗಣ್ಯ ವ್ಯಕ್ತಿಗಳಿಗೆ ಸೇರಿದ ಬಂಗಲೆಗಳು ಇವೆ. ಹೈಪ್ರೊಫೈಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು. ಜಾಲತಾಣಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿತ್ತು. ವಾಟ್ಸಾಪ್, ಫೇಸ್ ಬುಕ್, ವೆಬ್ ಕಾಲ್ ಮಾಧ್ಯಮಗಳ ಮೂಲಕ ಫೋಟೋ ಕಳುಹಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರು.

ಈ ಮನೆಯಲ್ಲಿ ವಾಸವಿದ್ದ ಮಹಿಳೆ ದಮನ್ ಗೆ ಪ್ರವಾಸಕ್ಕೆ ತೆರಳಿದ್ದಾಳೆ. ನಿವೃತ್ತ ಅಧಿಕಾರಿಗೆ ಸೇರಿದ ಬಂಗಲೆಯಲ್ಲಿ ಹೊರಗಿನ ಯುವತಿಯರ ಜೊತೆಗೆ ರಾತ್ರಿಯಿಡೀ ಡ್ಯಾನ್ಸ್, ಡ್ರಿಂಕ್ಸ್ ಪಾರ್ಟಿ ನಡೆಸಲಾಗುತ್ತಿದ್ದು. ಗ್ರಾಹಕರಿಗೆ ಪ್ಯಾಕೇಜ್ ಕೂಡ ಕೊಡುತ್ತಿದ್ದರು. ನಿವೃತ್ತ ಪೊಲೀಸ್ ಅಧಿಕಾರಿಗೆ ಬಂಗಲೆ ಸೇರಿದ್ದರೂ ಅದನ್ನು ಬಾಡಿಗೆ ಪಡೆದು ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...