alex Certify ಹೇಗಿದೆ ಗೊತ್ತಾ ಪಾಂಡ್ಯ ಸಹೋದರರ ಐಷಾರಾಮಿ ಬಂಗಲೆ…? ಇಲ್ಲಿದೆ ಅದರ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ ಪಾಂಡ್ಯ ಸಹೋದರರ ಐಷಾರಾಮಿ ಬಂಗಲೆ…? ಇಲ್ಲಿದೆ ಅದರ ಫೋಟೋ

ಹಾರ್ದಿಕ್​ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಎಂದರೆ ಗೊತ್ತಿಲ್ಲ ಎನ್ನುವವರು ಸಿಗೋದು ತುಂಬಾನೇ ಕಡಿಮೆಯೇ. ಸತತ ಪರಿಶ್ರಮದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಸಹೋದರರ ಕತೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಟೀಂ ಇಂಡಿಯಾದ ಆಲ್​ರೌಂಡರ್​ ಪಟ್ಟಿಯಲ್ಲಿ ಸ್ಥಾನ ಪಡೆದಿರೋ ಈ ಸಹೋದರರು ಬಹುತೇಕ ಕ್ರಿಕೆಟ್​ ಅಭಿಮಾನಿಗಳ ಫೇವರಿಟ್​ ಆಟಗಾರರೂ ಹೌದು.

ಪಾಂಡ್ಯ ಸಹೋದರರನ್ನ ಟೀಂ ಇಂಡಿಯಾ ಜೆರ್ಸಿಯನ್ನ ನೋಡೋದು ತಂದೆ ದಿವಂಗತ ಹಿಮಾಂಶು ಪಾಂಡ್ಯರಿಗೆ ಕನಸಾಗಿತ್ತು. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಸಾಧನೆಯ ಶಿಖರದಲ್ಲಿರುವ ಈ ಸಹೋದರರು ತಮ್ಮ ಐಷಾರಾಮಿ ಜೀವನದ ಮೂಲಕವೂ ಆಗಾಗ ಸುದ್ದಿಯಲ್ಲಿರ್ತಾರೆ.

ಗುಜರಾತ್​ನ ವಡೋದರಾದಲ್ಲಿ ಪಾಂಡ್ಯ ಸಹೋದರರು ಐಷಾರಾಮಿ ಪೆಂಟ್​​ಹೌಸ್​ನ್ನು ಖರೀದಿ ಮಾಡಿದ್ದಾರೆ. ಈ ಮನೆಯ ಐಷಾರಾಮಿತನ ಹೇಗಿದೆ ಅನ್ನೋದಕ್ಕೆ ಇವರ ಸೋಶಿಯಲ್​ ಮೀಡಿಯಾದ ಖಾತೆಗಳ ಮೇಲೆ ನೀವು ಒಮ್ಮೆ ಕಣ್ಣು ಹಾಯಿಸಿದರೂ ಸಾಕು. ಜಿಮ್​ ಸೌಲಭ್ಯ, ಕ್ಯಾರಿಯೋಕೆ ರೂಂ, ಐಷಾರಾಮಿ ಅತಿಥಿ ಗೃಹ, ವಿಶಾಲವಾದ ಡೈನಿಂಗ್​ ಕೋಣೆ, ಅತ್ಯಂತ ಸುಂದರವಾದ ಟೆರ್ರೆಸ್​, ಗಾರ್ಡನ್​ ಹೀಗೆ ಈ ಮನೆಯನ್ನ ನೋಡೋಕೆ ಎರಡು ಕಣ್ಣು ಸಾಲದು.

ಪಾಂಡ್ಯಾ ಸಹೋದರರ ಈ ಮನೆಯು ಸುಮಾರು 6000 ಚದರ ಅಡಿಯ ಅಪಾರ್ಟ್​ಮೆಂಟ್​ ಆಗಿದೆ. ಕ್ರಿಕೆಟ್​ನಿಂದ ವಿರಾಮ ಬೇಕೆನಿಸಿದಾಗೆಲ್ಲ ಪಾಂಡ್ಯ ಬ್ರದರ್ಸ್ ಇದೇ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರಂತೆ..!

ಪ್ರಸ್ತುತ ಪಾಂಡ್ಯ ಸಹೋದರರು ಶ್ರೀಲಂಕಾ ವಿರುದ್ಧ ಜುಲೈ ತಿಂಗಳಲ್ಲಿ ನಡೆಯಲಿರುವ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಡಬ್ಲುಟಿಸಿ ಫಿನಾಲೆಗಾಗಿ ಸೌತಾಂಪ್ಟನ್​ನಲ್ಲಿದೆ ಮತ್ತು ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಜೋ ರೂಟ್​ ನೇತೃತ್ವದ ಇಂಗ್ಲೆಂಡ್​ ತಂಡದ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನ ಎದುರಿಸಬೇಕಿದೆ.

View this post on Instagram

A post shared by Nataša Stanković✨ (@natasastankovic__)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...