alex Certify ಐಪಿಎಲ್ ಹರಾಜು: ಲಕ್ಷಗಳಿಗೆ ಬಿಕರಿಯಾಗಿದ್ದ ಈ ಆಟಗಾರರು ಈಗ ಗಳಿಸಿದ್ದು ಕೋಟಿ ಕೋಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಹರಾಜು: ಲಕ್ಷಗಳಿಗೆ ಬಿಕರಿಯಾಗಿದ್ದ ಈ ಆಟಗಾರರು ಈಗ ಗಳಿಸಿದ್ದು ಕೋಟಿ ಕೋಟಿ…!

2022 ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ವಿಶ್ವ ಕ್ರಿಕೆಟ್‌ನ ಕೆಲವು ದೊಡ್ಡ ಹೆಸರುಗಳನ್ನು 10 ಫ್ರಾಂಚೈಸಿಗಳು ದೊಡ್ಡ ಮೊತ್ತಕ್ಕೆ ಖರೀದಿಸಿವೆ. ಟೂರ್ನಮೆಂಟ್‌ನ 2021ರ ಆವೃತ್ತಿಯಲ್ಲಿ ವಿವಿಧ ಆಟಗಾರರು ತಮ್ಮ ಸಂಬಳದಿಂದ ಭಾರಿ ವೇತನವನ್ನು ಗಳಿಸಿದ್ದಾರೆ.

ಅದರಲ್ಲಿ ದೊಡ್ಡ ಗಳಿಕೆ ಎಂದರೆ ಇಶಾನ್ ಕಿಶನ್ ಅವರನ್ನ ಮುಂಬೈ ಇಂಡಿಯನ್ಸ್ 15.25 ಕೋಟಿ ಪಾವತಿ ಮಾಡಿ ರೀ-ಸೈನ್ ಮಾಡಿಕೊಂಡಿದೆ. ಇಶಾನ್ ಕಿಶನ್ ರಂತಹ ದೊಡ್ಡ ಮೊತ್ತದ ಏರಿಕೆ ಕಂಡ ಐವರು ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

1. ದೀಪಕ್ ಚಹಾರ್(CSK)-13.20 ಕೋಟಿ ಹೆಚ್ಚಳ

ದೀಪಕ್ ಚಹಾರ್ ಭಾರತದ ಕ್ಲಾಸಿ ಫಾಸ್ಟ್ ಬೌಲರ್, ಮೊದಲು ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸಿ ದೀಪಕ್ ಅವ್ರನ್ನ ಕೇವಲ 80 ಲಕ್ಷಕ್ಕೆ ಖರೀದಿಸಿತ್ತು. ಆದರೆ ಈ ಬಾರಿಯ ಹರಾಜಿನಲ್ಲಿ 14 ಕೋಟಿ ಪಾವತಿಸಿದೆ. ಯಾವೊಬ್ಬ ಆಟಗಾರನಿಗೆ CSK ಹತ್ತು ಕೋಟಿಗಿಂತ ಹೆಚ್ಚು ಪಾವತಿಸಿ ಖರೀದಿಸಿದ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಚಹಾರ್ ಪಾತ್ರರಾಗಿದ್ದಾರೆ.

ರೈಲಿನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ ಮಾಡಿಕೊಂಡವ ಅರೆಸ್ಟ್

2. ಲಿಯಾಮ್ ಲಿವಿಂಗ್ ಸ್ಟನ್(PBKS)-10.75 ಕೋಟಿ ಹೆಚ್ಚಳ

ಈ ವರ್ಷದ ಹರಾಜಿನಲ್ಲಿ ಅತಿ ಹೆಚ್ಚು ಖರ್ಚು ಮಾಡಿದ ತಂಡ ಪಂಜಾಬ್. ಶಿಖರ್ ಧವನ್, ಕಗಿಸೋ ರಬಾಡ ಹಾಗೂ ಜಾನಿ ಬೇರ್ಸ್ಟೋ ರಂತಹ ವರ್ಲ್ಡ್ ಕ್ಲಾಸ್ ಪ್ಲೇಯರ್ಸ್ ಗಳನ್ನ ಖರೀದಿಸಿರುವ ಪಂಜಾಬ್, ಅತಿಹೆಚ್ಚು ಪಾವತಿಸಿದ್ದು ಇಂಗ್ಲಿಷ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟನ್ ಮೇಲೆ. ಬರೋಬ್ಬರಿ 11.50 ಕೋಟಿಗೆ ಲಿಯಾಮ್ ಅವರು ಮಾರಾಟವಾಗಿದ್ದಾರೆ‌. 2021ರಲ್ಲಿ ರಾಜಸ್ಥಾನ್ ರಾಯಲ್ಸ್ ಇದೇ ಆಟಗಾರನನ್ನು ಕೇವಲ 75 ಲಕ್ಷಕ್ಕೆ ಖರೀದಿಸಿತ್ತು.

3. ಹರ್ಷಲ್ ಪಟೇಲ್(RCB)-10.55 ಕೋಟಿ ಹೆಚ್ಚಳ

2021ರ ಪರ್ಪಲ್ ಕ್ಯಾಪ್ ವಿನ್ನರ್ ಹರ್ಷಲ್ ಪಟೇಲ್ ಅನ್ನು ಆರ್ಸಿಬಿ ರಿಟೇನ್ ಮಾಡದೇ ಇದ್ದದ್ದು, ಅವರಿಗೆ ಅದೃಷ್ಟವಾಗಿ ಪರಿಣಮಿಸಿದೆ. 2018ರಲ್ಲಿ ಕೇವಲ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಹರ್ಷಲ್ ಅವ್ರನ್ನ ಕಳೆದ ಬಾರಿ ಬೆಂಗಳೂರು ತಂಡ ಅದೇ ಮೊತ್ತಕ್ಕೆ ಖರೀದಿಸಿತ್ತು. ಆದರೆ ಈ ವರ್ಷ ಅವ್ರನ್ನ ರೀ ಸೈನ್ ಮಾಡುವುದಕ್ಕೆ ಬೆಂಗಳೂರು ತಂಡ ಪಾವತಿಸಿರುವುದು ಬರೋಬ್ಬರಿ, 10.75 ಕೋಟಿ.

4. ವನಿಂಡು ಹಸರಂಗ(RCB)-10.25 ಕೋಟಿ ಹೆಚ್ಚಳ

ವಿಶ್ವ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸುತ್ತಿರುವ ಆಲ್ ರೌಂಡರ್ ವನಿಂದು ಹಸರಂಗ ಅವ್ರನ್ನ ಬೆಂಗಳೂರು ತಂಡ 10.75 ಕೋಟಿಗೆ ಖರೀದಿಸಿದೆ. ಹರ್ಷಲ್ ಹಾಗೂ ವನಿಂಡು ಬೆಂಗಳೂರು ತಂಡದ ಎಕ್ಸ್ ಪೆನ್ಸಿವ್ ಪ್ಲೇಯರ್ಸ್ ಆಗಿದ್ದಾರೆ. ಕಳೆದ ವರ್ಷ ಕೇವಲ‌ 50 ಲಕ್ಷಕ್ಕೆ ಇದೇ ಆರ್ಸಿಬಿ ತಂಡ ವನಿಂಡು ಅವ್ರನ್ನ ಖರೀದಿಸಿತ್ತು, ಮಿಡ್ ಸೀಸನ್ ನಲ್ಲಿ ಜಾಂಪಾಗೆ ರಿಪ್ಲೇಸ್ ಆಗಿದ್ದ ಇವರು ಈಗ ಅತಿ ಹೆಚ್ಚು ಮೊತ್ತ ಪಡೆದುಕೊಂಡು ದಾಖಲೆ ಬರೆದಿದ್ದಾರೆ.

5. ಪ್ರಸಿದ್ಧ್ ಕೃಷ್ಣ(RR)-9.80 ಕೋಟಿ ಹೆಚ್ಚಳ

ಮೆಗಾ ಹರಾಜಿಗೂ ಮೊದಲು ಒಡಿಐನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೃಷ್ಣ ಅದೃಷ್ಟ ಖುಲಾಯಿಸಿದೆ. 2018ರಲ್ಲಿ ಕೆಕೆಆರ್ ತಂಡ ಕೃಷ್ಣ ಅವ್ತನ್ನ ಕೇವಲ‌ 20 ಲಕ್ಷಕ್ಕೆ ಖರೀದಿಸಿತ್ತು, ಆದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪ್ರಸಿದ್ಧ್ ಕೃಷ್ಣ ಅವರನ್ನ 10 ಕೋಟಿಗೆ ಖರೀದಿಸಿದೆ‌‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...