alex Certify ದೀಪಕ್ ಚಹರ್ ಮನವಿ ಮಾಡಿದ್ರೂ ಆಟೋಗ್ರಾಫ್ ನೀಡಲು ಹಿಂಜರಿದ ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಕ್ ಚಹರ್ ಮನವಿ ಮಾಡಿದ್ರೂ ಆಟೋಗ್ರಾಫ್ ನೀಡಲು ಹಿಂಜರಿದ ಧೋನಿ

ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿ 5ನೇ ಬಾರಿಗೆ ಐಪಿಎಲ್ ಕಪ್ ಎತ್ತಿ ಹಿಡಿದ ಸಿಎಸ್ ಕೆ ಗೆಲುವಿನ ಸಂಭ್ರಮದಲ್ಲಿದೆ. ಪಂದ್ಯದ ಬಳಿಕ ಸಂಭ್ರಮಾಚರಣೆ ವೇಳೆ ನಾಯಕ ಮಹೇಂದ್ರ ಸಿಂಗ್ ಧೋನಿ, ದೀಪಕ್ ಚಹರ್ ಉಲ್ಲಾಸದ ಕ್ಷಣಗಳನ್ನು ಹಂಚಿಕೊಂಡರು. ಧೋನಿ ಬಳಿ ದೀಪಕ್ ಚಹರ್ ಆಟೋಗ್ರಾಫ್ ಕೇಳಲು ಬರುತ್ತಾರೆ. ಈ ವೇಳೆ ಧೋನಿ ಗೇಲಿ ಮಾಡುತ್ತಾ ಚಹರ್ ಶರ್ಟ್ ಮೇಲೆ ಆಟೋಗ್ರಾಫ್ ಹಾಕಲು ನಿರಾಕರಿಸುತ್ತಾರೆ.

ಚಹರ್ ಕೈಚೆಲ್ಲಿದ ಕ್ಯಾಚ್ ಬಗ್ಗೆ ಧೋನಿ ಈ ವೇಳೆ ಸನ್ನೆ ಮಾಡುವುದನ್ನ ಕಾಣಬಹುದು. ಆದರೂ ಚಹಾರ್ ಧೋನಿಯವರ ಆಟೋಗ್ರಾಫ್ ಕೇಳುತ್ತಲೇ ಇದ್ದರು. ಕೆಲವು ಕ್ಷಣಗಳ ನಂತರ ಧೋನಿ ಚಹರ್ ಕೋರಿಕೆಯನ್ನು ಸ್ವೀಕರಿಸಿ ಅವರ ಶರ್ಟ್ ಮೇಲೆ ಮುಗುಳ್ನಗುತ್ತಾ ಸಹಿ ಹಾಕುತ್ತಾರೆ. ಈ ವಿಡಿಯೋ ಧೋನಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...