alex Certify ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಬಸ್ ಪಾಸ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಬಸ್ ಪಾಸ್ ವಿತರಣೆ

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಬಿಎಂಟಿಸಿಯಿಂದ ಕಾರ್ಮಿಕರಿಗೆ ಬಸ್ ಪಾಸ್ ನೀಡಲಾಗುತ್ತದೆ. ಕಾರ್ಮಿಕರು ಬೋರ್ಡ್ ನಿಂದ ನೀಡಲಾದ ನೋಂದಾಯಿತ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ, ಎರಡು ಸ್ಟಾಂಪ್ ಸೈಜ್ ಫೋಟೋ ನೀಡಿ ಪಾಸ್ ಗಳನ್ನು ಪಡೆಯಬಹುದಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಶಿವಾಜಿನಗರ, ಯಶವಂತಪುರ, ಬನಶಕರಿ, ವಿಜಯನಗರ, ವೈಟ್‌ಫೀಲ್ಡ್, ಶಾಂತಿನಗರ, ದೊಮ್ಮಲೂರು, ಕೆಂಗೇರಿ, ಜಯನಗರ, ಕೋರಮಂಗಲದ ಬಸ್‌ ಟರ್ಮಿನಲ್‌ಗಳು ಸೇರಿದಂತೆ 20 ಸ್ಥಳಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...