alex Certify ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್

fourth Shot of Coronavirus vaccine to be needed soon israel health expert says | जल्द पड़ेगी Corona Vaccine की चौथी डोज की जरूरत, हेल्थ एक्सपर्ट ने दी ये चेतावनी | Hindi News, दुनिया

ಕೊರೊನಾ ವೈರಸ್ ವಿರುದ್ಧ ವಿಶ್ವದ ಎಲ್ಲ ದೇಶಗಳೂ ಹೋರಾಟ ನಡೆಸುತ್ತಿವೆ. ಈ ಯುದ್ಧದಲ್ಲಿ ಇಸ್ರೇಲ್ ಮುಂದಿದೆ. ಆರಂಭದ ದಿನಗಳಲ್ಲಿ ಇಸ್ರೆಲ್ ತೆಗೆದುಕೊಂಡ ಕ್ರಮ, ಮುಂಜಾಗ್ರತೆಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು. ಅನೇಕ ದೇಶಗಳಲ್ಲಿ ಇನ್ನೂ ಎರಡನೇ ಡೋಸ್ ಲಸಿಕೆ ಎಲ್ಲ ನಾಗರಿಕರಿಗೆ ಸಿಕ್ಕಿಲ್ಲ. ಈ ಮಧ್ಯೆ ಇಸ್ರೇಲ್ ನಾಲ್ಕನೇ ಡೋಸ್ ಬಗ್ಗೆ ಮಾತನಾಡ್ತಿದೆ.

ಇಸ್ರೇಲಿ ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ, ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಅಗತ್ಯವಿದೆ ಎಂದಿದ್ದಾರೆ. ವರದಿಯ ಪ್ರಕಾರ, ಇಸ್ರೇಲ್ ತನ್ನ ಎಲ್ಲ ನಾಗರಿಕರಿಗೆ ಕರೋನಾ ವೈರಸ್‌ನ ಬೂಸ್ಟರ್ ಶಾಟ್‌ಗಳನ್ನು ನೀಡಲು ಆರಂಭಿಸಿದೆ. ಎಲ್ಲಾ ಇತರ ದೇಶಗಳು ಕನಿಷ್ಠ ದುರ್ಬಲ ಜನರಿಗೆ ಲಸಿಕೆ ಹಾಕುವವರೆಗೆ ಬೂಸ್ಟರ್ ಕಾರ್ಯಕ್ರಮ ಆರಂಭಿಸುವುದು ಬೇಡವೆಂದು ಡಬ್ಲ್ಯುಎಚ್ ಒ ಮನವಿ ಮಾಡಿದೆ.

ಕೊರೊನಾ ಬಗ್ಗೆ ಮಾತನಾಡಿದ ಇಸ್ರೇಲ್ ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ, ಕೊರೊನಾ ಹಲವು ರೂಪಾಂತರಗಳಲ್ಲಿ ಹೊರ ಬರ್ತಿದೆ. ಡೆಲ್ಟಾ ರೂಪಾಂತರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೆಚ್ಚಿನ ಸಾವಿಗೆ ಇದು ಕಾರಣವಾಗುವ ಸಾಧ್ಯತೆಯಿದೆ. ಆ ಸಂದರ್ಭದಲ್ಲಿ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಅಗತ್ಯವಾಗಬಹುದು ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಿದ್ಧರಾಗಿರುವಂತೆ ಅವರು ತಿಳಿಸಿದ್ದಾರೆ.

ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ ಅವರ ಪ್ರಕಾರ, ಬೂಸ್ಟರ್ ಶಾಟ್‌ಗಳು ಕೊರೊನಾ ರೂಪಾಂತರಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿವೆ. ಡೆಲ್ಟಾ ರೂಪಾಂತರ ಹೆಚ್ಚುತ್ತಿರುವ ಸಂದರ್ಭದಲ್ಲಿ ಬೂಸ್ಟರ್ ಶಾಟ್‌ಗಳ ಅಗತ್ಯ ಹೆಚ್ಚಾಗಿದೆ ಎಂದವರು ಹೇಳಿದ್ದಾರೆ. ಕೊರೊನಾ ಮುಂದಿನ ಅಲೆಯ ಬಗ್ಗೆಯೂ ಸಲ್ಮಾನ್ ಜಾರ್ಕಾ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಾಲ್ಕನೇ ಅಲೆಯಿಂದ ಪಾಠ ಕಲಿಯಬೇಕು ಕನಿಷ್ಠ 6 ತಿಂಗಳು ಅಥವಾ ಒಂದು ವರ್ಷದಲ್ಲಿ ಬೂಸ್ಟರ್ ಶಾಟ್‌ಗಳ ಅಗತ್ಯವಿದೆ ಎಂದವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...