alex Certify ಇಲ್ಲಿದೆ ನೋಡಿ ವಿಚ್ಚೇದನ ಪಡೆದ ಟೀಂ ಇಂಡಿಯಾ ಆಟಗಾರರ ಪಟ್ಟಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ವಿಚ್ಚೇದನ ಪಡೆದ ಟೀಂ ಇಂಡಿಯಾ ಆಟಗಾರರ ಪಟ್ಟಿ…..!

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್​ ಹಾಗೂ ಅವರ ಪತ್ನಿ ಆಯೇಷಾ ಮುಖರ್ಜಿ ತಮ್ಮ 8 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಸಂಬಂಧ ಧವನ್​ರ ಮಾಜಿ ಪತ್ನಿ ಇನ್​ಸ್ಟಾಗ್ರಾಂ ಮೂಲಕ ಮಾಹಿತಿಯನ್ನೂ ಶೇರ್​ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಆಯೇಷಾ ‘ನಾನು 2 ಬಾರಿ ವಿಚ್ಚೇದನ ಪಡೆಯುವವರೆಗೂ ವಿಚ್ಛೇದನ ಒಂದು ಕೆಟ್ಟ ಶಬ್ದ ಎಂದೇ ಭಾವಿಸಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಮೆಲ್ಬೋರ್ನ್​ ಮೂಲದ ಆಯೇಷಾ ಮೊದಲು ಆಸ್ಟ್ರೇಲಿಯಾದ ಉದ್ಯಮಿಯನ್ನು ವರಿಸಿದ್ದರು. ಈ ದಂಪತಿಗೆ 2 ಹೆಣ್ಣು ಮಕ್ಕಳು ಸಹ ಇದ್ದಾರೆ. ಇದಾದ ಬಳಿಕ 2009ರಲ್ಲಿ ಶಿಖರ್​​ ಧವನ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆಯೇಷಾ 2012ರಲ್ಲಿ ಧವನ್​ರನ್ನು ವರಿಸಿದ್ದರು. ಆಯೇಷಾ ಹವ್ಯಾಸಿ ಕಿಕ್​ ಬಾಕ್ಸರ್​ ಕೂಡ ಆಗಿದ್ದಾರೆ.

ʼತಮಾಷೆಯ ವಿಚಾರ ಅಂದರೆ ಒಂದೊಂದು ಪದಗಳು ಪ್ರಬಲವಾದ ಅರ್ಥವನ್ನು ಹೊಂದಿರುತ್ತದೆ. ನಾನು ವಿಚ್ಚೇದನ ಪಡೆದ ಬಳಿಕ ಇದನ್ನು ಅನುಭವಿಸಿದ್ದೇನೆ. ಮೊದಲ ಬಾರಿಗೆ ವಿಚ್ಛೇದನ ಪಡೆದಾಗ ನನಗೆ ಭಯವಾಗಿತ್ತು. ಆಗ ನನಗೆ ತಪ್ಪು ಮಾಡುತ್ತಿದ್ದೇನೆ ಎಂದು ಎನಿಸುತ್ತಿತ್ತುʼ ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಕೇವಲ ಧವನ್​ ಮಾತ್ರ ವಿಚ್ಛೇದನ ಪಡೆದ ಕ್ರಿಕೆಟ್​ ಆಟಗಾರನಲ್ಲ. ಟೀಂ ಇಂಡಿಯಾದಲ್ಲಿ ಈ ರೀತಿಯ ಅನೇಕ ವಿಚ್ಛೇದನಗಳು ಈ ಹಿಂದೆ ಕೂಡ ನಡೆದಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ.

ಮೊಹಮ್ಮಸ್​ ಅಝರುದ್ದೀನ್​ ಹಾಗೂ ಸಂಗೀತಾ ಬಿಜಲಾನಿ

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಈಗ ಹೇಗೆ ಪ್ರಸಿದ್ದಿ ಪಡೆದಿದ್ದಾರೋ ಈ ಹಿಂದೆ ಅಜರುದ್ದೀನ್​ ಹಾಗೂ ಸಂಗೀತಾ ಬಿಜಲಾನಿ ಜೋಡಿ ಕೂಡ ಇಷ್ಟೇ ಸದ್ದು ಮಾಡಿತ್ತು. ಮೊದಲು ನೌರೀನ್​ ಎಂಬವರನ್ನು ವರಿಸಿದ್ದ ಅಜರುದ್ದೀನ್​ 2 ಮಕ್ಕಳನ್ನು ಹೊಂದಿದ್ದರು. ಆದರೆ ಇದಾದ ಬಳಿಕ ಅಂದರೆ 1996ರಲ್ಲಿ ಸಂಗೀತಾ ಬಿಜಲಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿ 2010ರಲ್ಲಿ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ.

ವಿನೋದ್​ ಕಾಂಬ್ಳಿ ಹಾಗೂ ನೊಯೆಲ್ಲಾ ಲೂಯಿಸ್​

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ 1998ರಲ್ಲಿ ತಮ್ಮ ಬಾಲ್ಯದ ಗೆಳತಿ ನೊಯೆಲ್ಲಾ ಲೂಯಿಸ್​ ಜೊತೆ ವಿವಾಹವಾಗಿದ್ದರು. ಆದರೆ ಕೆಲ ಕಾರಣಗಳಿಂದಾಗಿ ಈ ಜೋಡಿ ವಿಚ್ಚೇದನ ಪಡೆಯಿತು. ಕಾಂಬ್ಳಿ ಈಗ ತಮ್ಮ ಈಗಿನ ಪತ್ನಿ ಆಂಡ್ರಿಯಾ ಜೊತೆ ಇದ್ದಾರೆ.

ಜಾವಗಲ್​ ಶ್ರೀನಾಥ್​ ಹಾಗೂ ಜ್ಯೋತ್ಸಾ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಾವಗಲ್​ ಶ್ರೀನಾಥ್​​ 9 ವರ್ಷಗಳ ಕಾಲ ಜ್ಯೋತ್ನಾ ಜೊತೆ ವೈವಾಹಿಕ ಜೀವನ ನಡೆಸಿದ್ದರು. ಈ ದಂಪತಿ 1999ರಲ್ಲಿ ಮದುವೆಯಾಗಿದ್ದು, ಈ ಜೋಡಿ 2008ರಲ್ಲಿ ಡಿವೋರ್ಸ್ ಪಡೆದಿತ್ತು. ಜಾವಗಲ್​ ಇದಾದ ಬಳಿಕ ಪತ್ರಕರ್ತೆ ಮಾಧವಿ ಪತ್ರಾವಳಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಿನೇಶ್​ ಕಾರ್ತಿಕ್ ಹಾಗೂ​ ನಿಖಿತಾ ವಂಜಾರಾ

ಇದೊಂದು ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಟೀಂ ಇಂಡಿಯಾ ಕ್ರಿಕೆಟಿಗನ ವಿಚ್ಚೇದನ ಎಂದು ಹೇಳಿದರೆ ತಪ್ಪಾಗಲಾರದು. ಟೀಂ ಇಂಡಿಯಾದ ವಿಕೆಟ್​ ಕೀಪರ್​ ಹಾಗೂ ಬ್ಯಾಟ್ಸ್​ಮನ್​ ದಿನೇಶ್​ ಕಾರ್ತಿಕ್​ 2012ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಖಿತಾರನ್ನು ವರಿಸಿದ್ದರು.

ಆದರೆ ತಮ್ಮ ಪತ್ನಿಗೆ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಮುರಳಿ ವಿಜಯ್​ ಜೊತೆ ಸಂಬಂಧ ಇದೆ ಎಂದು ತಿಳಿದ ಬಳಿಕ ನಿಖಿತಾಗೆ ವಿಚ್ಛೇದನ ನೀಡಿದ್ದಾರೆ. ಇದಾದ ಬಳಿಕ 2015ರಲ್ಲಿ ದಿನೇಶ್​ ಕಾರ್ತಿಕ್​​ ಪ್ರಖ್ಯಾತ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್​ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...