alex Certify ಹೋಂ ವರ್ಕ್​ ಮಾಡದ ಪುತ್ರನನ್ನು ಉಲ್ಟಾ ನೇತು ಹಾಕಿ ದೊಣ್ಣೆಯಿಂದ ಮನಬಂದಂತೆ ಥಳಿಸಿದ ಪಾಪಿ ತಂದೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂ ವರ್ಕ್​ ಮಾಡದ ಪುತ್ರನನ್ನು ಉಲ್ಟಾ ನೇತು ಹಾಕಿ ದೊಣ್ಣೆಯಿಂದ ಮನಬಂದಂತೆ ಥಳಿಸಿದ ಪಾಪಿ ತಂದೆ…..!

ಪುತ್ರ ಹೋಮ್​ವರ್ಕ್​ ಮಾಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ಬಾಲಕನ ಕಾಲಿಗೆ ಹಗ್ಗ ಬಿಗಿದು ಉಲ್ಟಾ ನೇತು ಹಾಕಿ ಚಿತ್ರಹಿಂಸೆ ನೀಡಿದ ಘಟನೆ ರಾಜಸ್ಥಾನದ ಚಿತ್ತೋರ್​ಗರ್​​ನ ಬೂಂದಿ ಎಂಬಲ್ಲಿ ನಡೆದಿದೆ. ಬಾಲಕನನ್ನು ಹಗ್ಗ ಕಟ್ಟಿ ಉಲ್ಟಾ ನೇತು ಹಾಕಿದ ಬಳಿಕ ಕೋಲು ತೆಗೆದುಕೊಂಡು ಹೊಡೆಯಲು ಆರಂಭಿಸಿದ್ದಾನೆ.

ಮಗನಿಗೆ ಚಿತ್ರಹಿಂಸೆ ನೀಡಿದ್ದನ್ನು ನೋಡಿ ತಾಯಿ ಮಧ್ಯಪ್ರವೇಶಿಸಿದ್ದಾರೆ. ಬಳಿಕ ಬಾಲಕನ ಮಾವ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಾಲಕನಿಗೆ ಚಿತ್ರ ಹಿಂಸೆ ನೀಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಚಿತ್ತೋರ್​ಗಢ ಜಿಲ್ಲೆಯ ವೈಕುಂಠಪುರ ಕ್ಷೇತ್ರದ ಬೇಗು ಗ್ರಾಮದಲ್ಲಿ ವಾಸಿಸುವ ಬಾಲಕನ ಚಿಕ್ಕಪ್ಪ ಮಕ್ಕಳ ಸಹಾಯವಾಣಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಕ್ಕಳ ಸಹಾಯವಾಣಿ ಸಿಬ್ಬಂದಿಯು ಚಿತ್ತೋರಗಢ ಠಾಣೆಗೆ ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ್ದಾರೆ. ಆದರೆ ಬೇಗು ಠಾಣಾ ವ್ಯಾಪ್ತಿಗೆ ಸೇರಿದ ಪ್ರಕರಣವಾದ್ದರಿಂದ ಬೇಗು ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.

ಈ ಘಟನೆಯ ಬಳಿಕ ತನ್ನ ಸಹೋದರನನ್ನು ಭೇಟಿಯಾದ ಮಹಿಳೆಯು ಪುತ್ರನಿಗೆ ಪತಿಯು ನೀಡಿದ ಚಿತ್ರ ಹಿಂಸೆಯ ಬಗ್ಗೆ ಮಾಹಿತಿ ನೀಡುತ್ತಾ ವಿಡಿಯೋವನ್ನು ತೋರಿಸಿದ್ದಾಳೆ. ಜೊತೆಯಲ್ಲಿ ಬಾಲಕನನ್ನು ತನ್ನ ಸಹೋದರನ ಜೊತೆಯೇ ಕಳುಹಿಸಿಕೊಟ್ಟಿದ್ದಾಳೆ. ಪ್ರಸ್ತುತ ಈ ಬಾಲಕ ತನ್ನ ಮಾವನ ಜೊತೆಯೇ ಇದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...